ಮೈಸೂರು,ಫೆಬ್ರವರಿ,26,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಸಂಶೋಧಕರ ಒಕ್ಕೂಟ ಹಾಗೂ ರೋಟ್ರ್ಯಾಕ್ಟ್ ಮೈಸೂರು ಇವರ ನೆರವಿನೊಂದಿಗೆ ಮಾನಸಗಂಗೋತ್ರಿ ಆವರಣದಲ್ಲಿರುವ ಗಂಗೋತ್ರಿ ಶಾಲೆಯ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶನಿವಾರ ಪರೀಕ್ಷಾ ತಯಾರಿ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಚೈತ್ರಾ ನಾರಾಯಣ್ ಅವರು, ರೋಟ್ಯ್ರಾಕ್ಟ್ ಮೈಸೂರು ಅಧ್ಯಕ್ಷರಾದ ಯಶಸ್ ಎಸ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಚಿಂದೇಗೌಡ ಸಿ.ಎ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Key words: mysore- Distribution-exam-preparation-book