ಮೈಸೂರು,ಫೆಬ್ರವರಿ,26,2022(www.justkannada.in): ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆ ಉಕ್ರೇನ್ ನಲ್ಲಿ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನ ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ 32 ಮಂದಿ ಸಹ ಉಕ್ರೇನ್ ನಲ್ಲಿ ಸಿಲುಕಿದ್ದು, 32 ಮಂದಿಯ ವಿವರವನ್ನು ಮೈಸೂರು ಜಿಲ್ಲಾಡಳಿತ ಸರ್ಕಾರ ಸಲ್ಲಿಸಿದೆ. ಉಕ್ರೇನ್ ದೇಶಕ್ಕೆ ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಉದ್ದೇಶಕ್ಕೆ ತೆರಳಿರುವವರ ವಿವರವನ್ನ ರಾಜ್ಯ ವಿಪತ್ತು ನಿರ್ವಾಹಕ ನಿರ್ವಹಣಾ ಪ್ರಾಧಿಕಾರಕ್ಕೆ ಜಿಲ್ಲಾ ವಿಪತ್ತು ತಜ್ಞ ಸುಧೀರ್ ಮಾಹಿತಿ ನೀಡಿದ್ದಾರೆ.
ಪಾಸ್ ಪೋರ್ಟ್ ವಿವರ, ಉಕ್ರೇನ್ ನಲ್ಲಿ ಆಶ್ರಯ ಪಡೆದಿರುವ ಸ್ಥಳದ ಮಾಹಿತಿ ನೀಡಿದ್ದು ಅವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, 32 ಮಂದಿಯೂ ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾ ವಿಪತ್ತು ತಜ್ಞ ಸುದೀರ್ ತಿಳಿಸಿದ್ದಾರೆ.
ಆತಂಕದಲ್ಲಿ ಮೈಸೂರು ವಿದ್ಯಾರ್ಥಿ ಶ್ರೀಗಣೇಶ್ ಪಿ.
ಉಕ್ರೇನ್ ಮೇಲೆ ರಷ್ಯಾ ಯುದ್ದ ನಡೆಸುತ್ತಿರುವ ಹಿನ್ನೆಲೆ ಅಲ್ಲಿ ಸಿಲುಕಿರುವ ಮೈಸೂರು ವಿದ್ಯಾರ್ಥಿ ಶ್ರೀಗಣೇಶ್ ಪಿ ಆತಂಕಗೊಂಡಿದ್ದು, ಇಂಡಿಯನ್ ಗವರ್ನಮೆಂಟ್ ಸಹಾಯಕ್ಕೆ ಬರಬೇಕೆಂದು ಶ್ರೀಗಣೇಶ್ ಪಿ ಮನವಿ ಮಾಡಿದ್ದಾರೆ. ಶ್ರೀಗಣೇಶ್ ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ಪುಟ್ಟಮಾದೇಗೌಡ, ಪ್ರಮೀಳಾ ರಾಣಿ ಪುತ್ರರಾಗಿದ್ದು, ಈಗಾಗಲೇ ನಾವು ಆತಂಕದಲ್ಲಿದ್ದೇವೆ. ಜಫ್ರೋಜಿಯಾ ಸಿಟಿಯ ಅಕ್ಕಪಕ್ಕದಲ್ಲಿ ಬಾಂಬ್, ಗನ್ ಸೌಂಡ್ ಇದೆ. ನಮ್ಮ ಯುನಿವರ್ಸಿಟಿಯವರು ನಮ್ಮನ್ನ ಅಂಡರ್ಗ್ರೌಡಲ್ಲಿ (ಬಂಕರ್) ಬಾಂಬ್ ಬಿಳದಿರುವ ರೀತಿ ವ್ಯವಸ್ಥೆ ಮಾಡಿದ್ದಾರೆ. ಆದರೆ ರಷ್ಯಾ ಮಿಲಿಟರಿಯವರು ಈಗಾಗಲೇ ಅಕ್ಕಪಕ್ಕದ ಜಿಲ್ಲೆಯಲ್ಲಿ ಬಂದಿದ್ದಾರೆ. ಇಲ್ಲಿಯೂ ಯಾವಾಗ ಬೇಕಾದ್ರೂ ದಾಳಿಯಾಗಬಹುದು. ಬ್ಯಾಂಕ್, ನೆಟ್, ಎಟಿಎಂ ಎಲ್ಲವೂ ಸ್ಥಗಿತ ಆಗಿದೆ. ಇಲ್ಲಿ ಸೈರನ್ ಮೂಲಕ ಎಲ್ಲರಿಗೂ ಯುದ್ದದ ಮಾಹಿತಿ ನೀಡುತ್ತಿದ್ದಾರೆ.ನಮಗೆ ಭಯವಿದೆ ನಮ್ಮ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಶ್ರೀಗಣೇಶ್ ಪಿ ಉಕ್ರೇನ್ನಿಂದ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
Key words: Mysore district -32 people -Ukraine.