ಮೈಸೂರು, ಜೂ,03, 2020 : (www.justkannada.in news): ವಿ.ಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳ ಪದ ಬಳಕೆ ಮಾಡಿದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ದೂರು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ವಿರುದ್ಧ, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದೂರು ದಾಖಲು.
ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ದೂರು ದಾಖಲು. ಕ್ರಿಮಿನಲ್ ಕೇಸ್ ನಡಿಯಲ್ಲಿ ಪುನೀತ್ ಕೆರೆಹಳ್ಳಿ ಬಂಧಿಸಿ ಎಂದು ಆಗ್ರಹಿಸಿದ ಕೈ ಮುಖಂಡರು.
ಪುನೀತ್ ಕೆರೆಹಳ್ಳಿ ಒಬ್ಬ ಬಿಜೆಪಿ, ಆರ್ ಆರ್ ಎಸ್ ಮೂಲದವ. ಆತ ವಾರದಲ್ಲಿ ಈ ರೀತಿ ವಿವಾದಾತ್ಮಕ ಮೂರ್ನಾಲ್ಕು ಪೋಸ್ಟ್ ಗಳನ್ನು ಹಾಕುತ್ತಾನೆ. ಆತನಿಗೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವುದೇ ಕೆಲಸ.
ಕಾಂಗ್ರೆಸ್ ನಾಯಕರ ಬಗ್ಗೆ ಅವಾಚ್ಯ ಪದ ಬಳಸಿ ಪದೇ ಪದೇ ಪೋಸ್ಟ್ ಮಾಡುತ್ತಿದ್ದು, ಇದು ಸರಿಯಾದ ಬೆಳವಣಿಗೆಯಲ್ಲ, ಈತನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ದೂರು ನೀಡಿದ ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಹೇಳಿಕೆ.
oooo
key words : Mysore-district-congress-comity-complains-against-puneeth kerehally-police