ಮೈಸೂರು,ಫೆ,7,2020(www.justkannada.in): ಮಹಾತ್ಮ ಗಾಂಧಿ ಕುರಿತು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ದ ದೂರು ನೀಡಲು ಮತ್ತು ಗೂಂಡಾ ಲಿಸ್ಟ್ ಗೆ ಸೇರಿಸುವಂತೆ ಕಮಿಷನರ್ ಗೆ ಮನವಿ ಮಾಡಲು ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗ ನಿರ್ಧಾರ ಮಾಡಿದೆ.
ಮಹಾತ್ಮ ಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಂವಿಧಾನ ವಿರುದ್ಧವಾಗಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದ ಅನಂತ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ರಾಜ್ಯ ವಕ್ತಾರ ಎಂ ಲಕ್ಷ್ಮಣ್ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಮಾತನಾಡಿದರು. ಸಂಸದ ಅನಂತ ಕುಮಾರ್ ಹೆಗ್ಡೆ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲು ದೂರು ನೀಡಲು ನಿರ್ಧಾರ ಮಾಡಿದ್ದೇವೆ. ಸಂಸತ್ ಸದಸ್ಯತ್ವ ಸ್ಥಾನ ರದ್ದುಪಡಿಸಲು ಕೋರಿ ರಾಷ್ಟ್ರಪತಿ ಹಾಗು ಲೋಕಸಭಾ ಸ್ಪೀಕರ್ ಗೆ ದೂರು ನೀಡುತ್ತೇವೆ. ನಾಳೆ ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿ ಹಾಗು ನಗರ ಪೋಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡುತೇವೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಸಂಸದ ಅನಂತ್ ಕುಮಾರ್ ಹೆಗ್ಡೆ ನಿರಂತರವಾಗಿ ಪ್ರಚೋದನಕಾರಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡ್ತಾ ಇದ್ದಾರೆ. ಹಳೆ ಕೇಸುಗಳ ಆಧಾರವಾಗಿ ತೆಗೆದುಕೊಂಡು ಗೂಂಡಾ ಲಿಸ್ಟ್ ಸೇರಿಸಲು ಕಮಿಷನರ್ ಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
2019 ರವರೆಗೆ 92 ಲಕ್ಷ ಕೋಟಿ ಸಾಲ ಮಾಡಿದ್ದೆ ಕೇಂದ್ರ ಸರ್ಕಾರದ ಸಾಧನೆ- ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್ ಕಿಡಿ….
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ್ ಲಕ್ಷ್ಮಣ್, ಎಂಟು ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೊಟ್ಟಿದ್ದು ಹುಸಿ ನಿರೀಕ್ಷೆ. ಸುಳ್ಳು ಭರವಸೆ ಕೊಟ್ಟಿದ್ದೆ ಇವರ ಪ್ರಮುಖ ಸಾಧನೆ.2019 ರವರೆಗೆ 92 ಲಕ್ಷ ಕೋಟಿ ಸಾಲ ಮಾಡಿದ್ದೆ ಇವರ ಸಾಧನೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
2014 ಉದ್ಯೋಗ ಸೃಷ್ಟಿ ಭರವಸೆ ಕೊಟ್ಟಿದ್ದರು. ಆದರೆ ಉದ್ಯೋಗ ಸೃಷ್ಟಿ ಇರಲಿ 6ಕೋಟಿ ಉದ್ಯೋಗ ಕಸಿದುಕೊಂಡಿದ್ದಾರೆ. ಕೇವಲ ಕ್ಯಾಚೀ ವರ್ಡ್ ಗಳ ಯೋಜನೆ ಕೊಡುವುದು ಅಷ್ಟೆ ಆಗಿದೆ. ಈಗ ಅಸೆಂಬಲ್ ಇಂಡಿಯಾ ಅಂತಾರೆ. ಇವರದ್ದು ಕೇವಲ ಶ್ಯೋಗನ್ ಚೇಂಜ್ ಮಾಡುವ ಸರ್ಕಾರ. ಕೇವಲ 800 ಜನ ಉದ್ಯಮಮಿಗಳಿಗೆ ಮಾತ್ರ ಇವರ ಬಜೆಟ್ ನಿಂದ ಅನುಕೂಲವಾಗಿದೆ. ಎಲ್ ಐ ಸಿಯ ಶೇರುಗಳನ್ನ ಮಾರಾಠ ಮಾಡುವ ಹೀನ ಸ್ಥಿತಿಗೆ ಕೇಂದ್ರ ತಲುಪಿದೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಬಜೆಟ್ ಮಂಡನೆ ಆಗಿದೆ. ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ದೇಶದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
Key words: Mysore- District -Congress -decision – file – complaint –against- MP Ananth Kumar Hegde