ಮೈಸೂರು,ಜನವರಿ,14,2021(www.justkannada.in): ಮಹಾಮಾರಿ ಕೊರೋನಾ ಲಸಿಕೆ ವಿತರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಲಸಿಕೆ ವಿತರಣೆಗೆ ಮೈಸೂರು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.
ಲಸಿಕೆ ವಿತರಣೆಗೆ ಡಿಎಚ್ಓ ಡಾ. ಅಮರನಾಥ್ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂತಿಮ ಹಂತದ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಲಸಿಕೆಗಳನ್ನು ತಾಲ್ಲೂಕುವಾರು ಕೇಂದ್ರಗಳಿಗೆ ರವಾನಿಸುವ ಕೆಲಸದಲ್ಲಿ ಡಿಎಚ್ಓ ಅಮರನಾಥ್ ನಿರತರಾಗಿದ್ಧಾರೆ.
ಈ ಕುರಿತು ಮಾತನಾಢಿರುವ ಡಿಹೆಚ್ ಓ ಅಮರನಾಥ್, ಈಗಾಗಲೇ ನಮ್ಮಲ್ಲಿ 20,000 ಡೋಸ್ ಗಳ ಲಸಿಕೆ ಲಭ್ಯವಿದೆ. ಒಟ್ಟು 33,000 ಡೋಸ್ ಲಸಿಕೆಗಳ ಅವಶ್ಯಕತೆ ಇದೆ. ಉಳಿಕೆ ಡೋಸ್ ಗಳ ಪೂರೈಕೆಗೆ ಈಗಾಗಲೇ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಸರ್ಕಾರ ಸೂಚನೆ ನೀಡಿದೆ. ಅವಶ್ಯಕತೆ ಇರುವ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಹುದ್ದೆಯ ತಾರತಮ್ಯ ಮಾಡದೇ ಲಸಿಕೆ ನೀಡಲಾಗುವುದು ಎಂದರು.
ಆರೋಗ್ಯ ಕಾರ್ಯಕರ್ತರ ಬಳಿಕ ಎರಡನೇ ಹಂತದಲ್ಲಿ ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ಮುಂಚೂಣಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುವುದು. ನಂತರ ಸರ್ಕಾರದ ಆದೇಶ ಹಾಗೂ ಸೂಚನೆ ಪ್ರಕಾರವಾಗಿ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಡಿಎಚ್ಓ ಡಾ. ಅಮರನಾಥ್ ಮಾಹಿತಿ ನೀಡಿದರು.
Key words: Mysore District -Government -Prepares –Corona- Vaccine -Distribution