ಮೈಸೂರು,ನವೆಂಬರ್,19,2021(www.justkannada.in): ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆರಾಯ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಜನರು ನಲುಗಿದ್ದಾರೆ.
ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ತತ್ತರಿಸಿದ್ದಾರೆ. ಹೀಗಾಗಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ. ಹೌದು, ಕಳೆದ ಒಂದೂವರೆ ತಿಂಗಳಿನಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮೈಸೂರಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಧಾರಾಕಾರ ಮಳೆಯಿಂದಾಗಿ ಮನೆ, ಅಂಗಡಿಗಳಿಗೆ ನೀರು ನುಗ್ಗುತ್ತಿದ್ದು,ರಸ್ತೆಗಳೆಲ್ಲಾ ಗುಂಡಿ ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಸಂಚಾಕಾರ ಎದುರಾಗಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜತೆಗೆ ಅನೇಕ ಶಿಥಿಲಾವಸ್ಥೆಗಳ ಕಟ್ಟಡಗಳು ಬೀಳುವ ಆತಂಕ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಮುಂಜಾಗ್ರತಾ ವಹಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಸೈಲೆಂಟ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಳೆಹಾನಿಯತ್ತ ತಿರುಗಿಯೂ ನೋಡಿಲ್ಲ. ಇನ್ನು ಅತ್ತು ಕರೆದು ಮೇಯರ್ ಆದ ಸುನಂದಾ ಪಾಲನೇತ್ರ ಅವರು, ಇದೇ ಮೊದಲ ಬಾರಿಗೆ ಪಾಲಿಕೆ ಅಧಿಕಾರದಲ್ಲಿರುವ ಬಿಜೆಪಿ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸುವಲ್ಲಿ ಸ್ಥಳೀಯ ಶಾಸಕರು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿ ಬಂದಿದೆ.
Key words: Mysore District – Heavy rain- in charge- Minister – missing.
ENGLISH SUMMARY…
Rain plays havoc in Mysuru District: District In-charge Minister absent
Mysuru, November 19, 2021 (www.justkannada.in): Incessant rains lashing the state have caused huge havoc at several places, including Mysuru, Bengaluru, Mandya, etc., disrupting normal life.
The people of Mysuru District are suffering a lot due to the incessant rains. But the District In-charge Minister who was supposed to visit the rain hit and provide relief has remained absent. Several low-lying areas of the District are inundated in rainwater causing havoc. Houses and shops were inundated in water disrupting normal life.
The rains have posed danger to several dilapidated buildings in the city. Despite all this, the officials and elected representatives concerned who were supposed to take precautionary measures have remained silent. The absence of the District In-charge Minister S.T. Somashekar in this time of crisis has triggered displeasure and anger among the public. People have also alleged that the local MLAs are also not responding to their grievances.
Keywords: Mysuru District/ Incessant rain/ havoc