ಮೈಸೂರು, ಮಾರ್ಚ್ 23, 2020 (www.justkannada.in): ಮೈಸೂರು ಜಿಲ್ಲಾ ಆಸ್ಪತ್ರೆ ಐಸೋಲೇಷನ್ ಆಸ್ಪತ್ರೆಯಾಗಿ ಬಳಕೆ ಮಾಡಲಾಗುತ್ತಿದೆ.
ಸೋಂಕಿತರೇಲ್ಲ ಒಂದೆ ಆಸ್ಪತ್ರೆಯಲ್ಲಿರುತ್ತಾರೆ. 150 ಬೆಡ್ ವ್ಯವಸ್ಥೆ ಇರುವ ಜಿಲ್ಲಾಸ್ಪತ್ರೆ ಐಸೋಲೇಷನ್ ಆಸ್ಪತ್ತೆಯಾಗಿ ಪರಿವರ್ತನೆ ಮಾಡಲಾಗಿದೆ.
ನಾಳೆಯಿಂದ ಎಲ್ಲ ಕೊರೋನಾ ಪಾಸಿಟಿವ್ ರೋಗಿಗಳಿಗೆ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೊಸ ಆಸ್ಪತ್ರೆ ಫುಲ್ ಆದ್ರೆ ಬಿಎಂಹೆಚ್ ಆಸ್ಪತ್ರೆಯಲ್ಲು ಐಸೋಲೇಷನ್ ತೆರೆಯಲಾಗುತ್ತದೆ.
ಇನ್ನು 10 ಆಸ್ಪತ್ರೆ ನಮ್ಮ ಬಳಿ ಸಿದ್ದವಾಗಿವೆ. ಯಾವುದೇ ಕ್ಷಣದಲ್ಲು ಕೊರೋನಾ ರೋಗಿಗಳಿಗೆ ಚಿಕಿತ್ಸೆಗೆ ಸಿದ್ದ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.