ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ, ನುಡಿ ನಮನ.

ಮೈಸೂರು,ಡಿಸೆಂಬರ್,16,2024 (www.justkannada.in): ಇತ್ತೀಚೆಗೆ ನಿಧನರಾದ  ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ, ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನಕ್ಕೆ  ನುಡಿ ನಮನ ಕಾರ್ಯಕ್ರಮ  ಆಯೋಜನೆ ಮಾಡಲಾಗಿತ್ತು.  ಎಸ್ ಎಂ ಕೃಷ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ರಾಜಕೀಯ ಒಡನಾಡಿಗಳು, ಹಿರಿಯ ಪತ್ರಕರ್ತರಿಂದ ಎಸ್ ಎಂ ಕೃಷ್ಣರ ವ್ಯಕ್ತಿತ್ವ ಅನಾವರಣ ಮಾಡಿದರು.

ಇದೇ ವೇಳೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್  ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮೈಸೂರು ಹಾಗೂ ಮೈಸೂರಿನ ಪತ್ರಕರ್ತರಿಗೆ ಎಸ್ ಎಂ ಕೃಷ್ಣರ ಕೊಡುಗೆಗಳನ್ನು ಸ್ಮರಿಸಿದರು. ಎಸ್ ಎಂ ಕೃಷ್ಣ ಅವರು ಜಿಲ್ಲೆಯ 100 ಜನ ಪತ್ರಕರ್ತರಿಗೆ ನಿವೇಶನ ಒದಗಿಸಿದ್ದರು.

ಹಾಗೆಯೇ ಕಾಂಗ್ರೆಸ್ ಮುಖಂಡ ಹೆಚ್ ಎ ವೆಂಕಟೇಶ್  ಪಾಲ್ಗೊಂಡು ಎಸ್ ಎಂ ಕೃಷ್ಣರೊಂದಿಗಿನ ಒಡನಾಟ, ಅವರ ವ್ಯಕ್ತಿತ್ವದ ಅನುಭವ ಹಂಚಿಕೊಂಡರು.

ನುಡಿ ನಮನ ಕಾರ್ಯಕ್ರಮದಲ್ಲಿ ಮೈಸೂಸು  ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಕೆ ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಪತ್ರಕರ್ತರು ಭಾಗಿಯಾಗಿದ್ದರು.

Key words: Mysore District Journalists Association, tribute, former CM, S.M. Krishna