ಮೈಸೂರು, ಮಾರ್ಚ್ 15, 2020 (www.justkannada.in): ಮೈಸೂರಿನಲ್ಲಿ ಕೊರೋನಾ ಬಗ್ಗೆ ಸುಳ್ಳುವದಂತಿ ಹರಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹರಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಹೇಳಿದ್ದಾರೆ.
ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಚೀನಿಯರು ಇದ್ದಾರೆ ಅವರಿಗೆ ಕೊರೋನಾ ಬಂದಿದೆ ಅಂತ ಸುದ್ದಿ ಹರಿದಾಡುತ್ತಿದೆ. ಈ ರೀತಿ ಯಾವುದೇ ಚಿನೀಯರು ಬೈಲುಕುಪ್ಪೆಗೆ ಬಂದಿಲ್ಲ. ಬೈಲುಕುಪ್ಪೆಯಲ್ಲಿರುವವರು ಟಿಬೇಟಿಯನ್ನರು. ಅವರು ಕೊರೋನಾ ಬಂದ ಮೇಲೆ ಮೈಸೂರು ಜಿಲ್ಲೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಬದಲಿಗೆ ಹತ್ತಾರು ವರ್ಷಗಳಿಂದ ಮೈಸೂರಿನಲ್ಲೆ ವಾಸ ಇದ್ದಾರೆ. ಅವರು ಚೀನಾ ಬಾರ್ಡರ್ನಿಂದ ಬಂದವರು. ಅವರ ಜೊತೆ ಸಂಪರ್ಕ ಇದ್ದರೆ ಕೊರೋನಾ ಬರುತ್ತೆ ಅಂತೇಲ್ಲ ಸುಳ್ಳು ಸುದ್ದಿ ಹರಡುತ್ತಿದೆ. ಹೀಗಾಗಿ ಯಾವುದೇ ವದಂತಿಗೆ ಜನ ಕಿವಿಗೊಡಬಾರದು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಕೇಸ್ ದಾಖಲು ಮಾಡ್ತಿವಿ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಹೇಳಿದ್ದಾರೆ.