ಮೈಸೂರು,ಮೇ,31,2021(www.justkannada.in): ಡಿಎಚ್ ಒ ವಿರುದ್ಧ ನಿಷೇಧಿತ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಡೆ ಬಗ್ಗೆ ಮೈಸೂರು ವೈದ್ಯರ ತಂಡ ಅಸಮಾಧಾನ ವ್ಯಕ್ತಪಡಿಸಿದೆ.
ಡಿಹೆಚ್ಓ ಕಚೇರಿಯ ವೈದ್ಯರ ಭವನದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಸಚಿವ ಎಸ್ ಟಿ ಸೋಮಶೇಖರ್ ವಿರುದ್ಧ ಮೈಸೂರು ವೈದ್ಯಾಧಿಕಾರಿಗಳ ತಂಡ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ವೇಳೆ ಮಾತನಾಡಿದ ಮೈಸೂರು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ದೇವಿ ಆನಂದ್ , ನಾವು ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿದ್ದೀವಿ. ಇಂತಹ ಸಮಯದಲ್ಲಿ ಸಹಕಾರ ನೀಡಬೇಕೆ ಹೊರತು ಅವಮಾನ ಮಾಡಬಾರದು. ಮೆ. 29ರಂದು ಉಸ್ತುವಾರಿ ಸಚಿವರು ನಡೆಸಿದ ಸಭೆಯಲ್ಲಿ ಡಿಹೆಚ್ಓ ಗೆ ಅವಾಚ್ಯ ಶಬ್ದ ಬಳಸಲಾಗಿದೆ. ಇದರಿಂದ ವೈದ್ಯಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಔಷಧಿ ವಿತರಣೆ ಅವ್ಯವಸ್ಥೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ಅನುದಾನ ನೀಡದಿದ್ದರೆ ಔಷಧಿ ಖರೀದಿಸೋದು ಹೇಗೆ. ಇದರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಅಧಿಕಾರಿಗಳು ತಪ್ಪು ಮಾಡಿದ್ರೆ ಕಾನೂನಾತ್ಮಕ ಕ್ರಮ ಜರುಗಿಸಿ. ಆದರೆ ಹೀಗೆ ಅಧಿಕಾರಿಗಳ ಎದುರು ಅವಾಚ್ಯ ಪದ ಬಳಕೆ ಖಂಡನೀಯ. ಇನ್ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡ್ಮೂರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಮೈಸೂರು ಡಿಎಚ್ ಒ ಅಮರ್ ನಾಥ್ ಅವರನ್ನ ಸಚಿವ ಎಸ್.ಟಿ ಸೋಮಶೇಖರ್ ತರಾಟೆ ತೆಗೆದುಕೊಂಡಿದ್ದರು. ಈ ವೇಳೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Key words: Mysore -doctors – team -expressed –their- displeasure- against –Minister- ST Somashekhar.
The doctors association and whole medical fraternity of Mysuru strongly condemn the actions of the elected representatives in targeting them