ಮೈಸೂರು,ಫೆ,24,2020(www.justkannada.in): ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿರುವುದನ್ನ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಗಾಂಧಿ ವೃತ್ತದ ಬಳಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಟ್ರಂಪ್ ಗೋ ಬ್ಯಾಕ್ ಎಂದು ಘೋಷಣೆ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಗೋಬ್ಯಾಕ್ ಟ್ರಂಪ್ ಅನ್ನೋ ಬ್ಯಾನರ್ ಹಿಡಿದು ಆಕ್ರೋಶ ಹೊರ ಹಾಕಿದರು. .
ಟ್ರಂಪ್ ಭಾರತಕ್ಕೆ ಭೇಟಿ ಸಮಯದಲ್ಲಿ ಹೈನುಗಾರಿಕೆ, ಕೋಳಿಮಾಂಸ ಮತ್ತು ಆಟೋಮೊಬೈಲ್ ಒಪ್ಪಂದ ಸಂಭವ ಹಿನ್ನೆಲೆ. ಅಮೇರಿಕಾ ಒಪ್ಪಂದ ರೈತರ ಮತ್ತು ಭಾರತ ಅರ್ಥ ವ್ಯವಸ್ಥೆಗೆ ವಿರೋಧಿಯಾಗಿದ್ದು. ಈ ಒಪ್ಪಂದವನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಟ್ರಂಪ್ ಭೇಟಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ…
ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಿನ್ನೆಲೆ ಡೊನಾಲ್ಟ್ ಟ್ರಂಪ್ ಭೇಟಿ ವಿರೋಧಿಸಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಒಪ್ಪಂದ ಜಾರಿಯಾದರೆ ರೈತರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೈನುಗಾರಿಕೆ ಹಾಗೂ ಕೋಳಿ ಉದ್ಯಮದ ಉತ್ಪನ್ನಗಳು ಹೆಚ್ಚು ಆಮದಾಗುತ್ತವೆ. ಇದರಿಂದ ಈ ಉದ್ಯಮ ನಂಬಿ ಬದಕುವವರು ತೊಂದರೆಗೆ ಒಳಗಾಗುತ್ತಾರೆ. ರೈತರ ಹೋರಾಟದಿಂದ ಆರ್ ಸಿ ಇ ಪಿ ಒಪ್ಪಂದದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಅದಕ್ಕಿಂತ ಅಪಾಯಕಾರಿ ಒಪ್ಪಂದಕ್ಕೆ ಮುಂದಾಗಿದೆ. ಕೆಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Key words: mysore-Donald Trump- GoBack’s- Movement -Protests