ಮೈಸೂರು,ಆ,6,2020(www.justkannada.in): ಡಾ.ಜಿ.ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಜನರು ಬಯಸುತ್ತಿದ್ದಾರೆ. ಎಂದು ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಹೆಚ್.ಎ ವೆಂಕಟೇಶ್ ಮಾತನಾಡಿದರು.
2013ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಸಿದ್ದರಾಮಯ್ಯ ಅವರು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರೂ ೨೦೧೮ ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸ್ವಲ್ಪ ಸ್ಥಾನ ಕೊರತೆ ಯಾಗಿದ್ದರಿಂದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ನೇತೃತ್ವದ ಸಮ್ಮಿಶ್ರಸರ್ಕಾರ ಅಧಿಕಾರಕ್ಕೆ ಬಂದು ಉಪಮುಖ್ಯಮಂತ್ರಿಯಾಗಲು ಕಾರಣವಾಯಿತು ಎಂದರು.
ಬಹಳ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಬೆಂಬಲಿಗನಾಗಿ ಅವರು ಸಿಎಂ ಅಗಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ. ನನ್ನಂತೆ ನಾಡಿನ ಲಕ್ಷಾಂತರ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದರು. ಯಾರ ಮೇಲೂ ದ್ವೇಷ,ಅಸೂಯೆ ಇರಲಿಲ್ಲ. ಭಿನ್ನಮತಕ್ಕೆ ಅವಕಾಶ ಕೊಡದೆ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರ ಕಾಲದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದನ್ನು ನಾವು ಗಮನಿಸಬೇಕು ಎಂದು ಹೆಚ್.ಎ ವೆಂಕಟೇಶ್ ನುಡಿದರು.
ಸಾಮಾಜಿಕ ನ್ಯಾಯದ ಪರವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಡಿ.ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಕರ್ನಾಟಕ ಕಾಯಿಗದೆ ಜಾರಿ ತಂದಿದ್ದರು. ನಂತರ, ಡಾ.ಜಿ.ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾದ ಬಳಿಕ ವಿವಿ ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಬಡ್ತಿ ನೀಡಿದರು. ನೇಮಕಾತಿಯಲ್ಲಿ ಬ್ಯಾಕ್ ಲಾಗ್ ತುಂಬಿದರು. ಗೃಹಸಚಿವರಾಗಿದ್ದಾಗ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದರು. ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದರು ಎಂದು ಬಣ್ಣಿಸಿದರು. ಶ್ರೀಯುತರ ತಂದೆ ಡಾ.ಎಚ್.ಗಂಗಾಧರಯ್ಯ ಅವರು ನೂರಾರು ವಿದ್ಯಾಸಂಸ್ಥೆಗಳು ಕಟ್ಟಿ ಬೆಳೆಸಿದ್ದನ್ನು ಡಾ.ಜಿ.ಪರಮೇಶ್ವರ್ ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಮುದಾಯ ಬೆಳೆಯಬೇಕು ಎನ್ನುವ ಕಾರಣಕ್ಕಾಗಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ್ದರ ಫಲವಾಗಿ ಅನೇಕರು ಓದಿ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಾಯಿತು ಎಂದರು.
ಕೊರೊನಾ ನಿಯಂತ್ರಣ ಮೀರಿರುವ ಹಿನ್ನೆಲೆಯಲ್ಲಿ ಹುಟ್ಟಹಬ್ಬವನ್ನು ಆಚರಿಸಿದಂತೆ ಡಾ.ಜಿ.ಪರಮೇಶ್ವರ್ ಅವರು ಅಭಿವಾನಿಗಳಿಗೆ, ಆತ್ಮೀಯರಿಗೆ ಸೂಚನೆ ನೀಡಿದ್ದರೂ. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನ್ನೂರು ಕೆ ರ ರಾಜು ವಹಿಸಿದ್ದರು. ಸಮಾರಂಭದಲ್ಲಿ ಮಹಾಪೌರರಾದ ಸಿ. ಶ್ರೀಧರ್, ವಕೀಲರಾದ ಎ . ಆರ.ಕಾಂತರಾಜ್, ತಿಮ್ಮಯ್ಯ, ಜಿಲ್ಲಾ ಯುವ ಸೇನೆ ಅಧ್ಯಕ್ಷ ಸಿ. ಮಂಜುನಾಥ್ ಉಪಸ್ಥಿತರಿದ್ದರು.
Key words: mysore- Dr.G.Parameshwar – people – become – CM – HA Venkatesh