ಮೈಸೂರು,ಡಿಸೆಂಬರ್,30,2024 (www.justkannada.in): ಇಂದು ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಈ ಅಂಗವಾಗಿ ಅಭಿಮಾನಿಗಳಿಂದ ರಕ್ತದಾನ ಹಾಗೂ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಗರದ ಎಚ್ ಡಿ ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿ ಇರುವ ನಟ ವಿಷ್ಣುವರ್ದನ್ ಅವರ ಸ್ಮಾರಕಕ್ಕೆ ನೂರಾರು ಜನ ಭೇಟಿ ನೀಡಿದರು. ನಟ ಡಾ.ವಿಷ್ಣುವರ್ದನ್ ಅವರ ಕುಟುಂಬಸ್ಥರಾದ ಭಾರತಿ ಮತ್ತು ಅಳಿಯ ಅನಿರುದ್ ಅವರೂ ಸಹ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾರ್ವಜನಿಕರಿಗೆ ಅಭಿಮಾನಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ ಅವರು ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಮಾಲಾರ್ಪಣೆ ಮಾಡಿ ವಿಷ್ಣುವರ್ಧನ್ ಅಭಿಮಾನಿ ಬಳಗದ ವಿಷ್ಣುವರ್ಧನ್ ಕೋಟಿಗೊಬ್ಬ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ನಂತರ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಈ ವೇಳೆ 60ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಆಲ್ವಿನ್, ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಎಂ ಎನ್ ಚೇತನ್ ಗೌಡ, ಲಕ್ಷ್ಮಣ, ಮಹದೇವ್, ಜೀವದಾರ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಸುರೇಶ್, ಪ್ರಭು, ಸಂತೋಷ್ ,ಸಿದ್ದಪ್ಪ, ಬಸವರಾಜು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಿಷ್ಣುದಾದ ಬಳಸುತ್ತಿದ್ದ ಕಾರು ಪ್ರದರ್ಶನ.
ಹಾಗೆಯೇ ವಿಷ್ಣು ಸ್ಮಾರಕದ ಬಳಿ ಪ್ರದರ್ಶನ ವಿಷ್ಣುದಾದ ಬಳಸುತ್ತಿದ್ದ ಕಾರು ಪ್ರದರ್ಶನ ಮಾಡಲಾಯಿತು. ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಟಯೊಟಾ ಸುಪ್ರ ಕಾರು ನೋಡಿ ಅಭಿಮಾನಿಗಳು ಖುಷಿ ಪಟ್ಟರು. ಇಂದಿನ ಲ್ಯಾಂಬರ್ಗಿನಿ ಕಾರಿಗೆ ಸಮವಾದ ಸುಪ್ರ ಕಾರು. ಕುಚುಕು ರೆಬಲ್ ಸ್ಟಾರ್ ಅಂಬರೀಶ್ ಜೊತೆ ಈ ಕಾರಿನಲ್ಲಿ ವಿಷ್ಣುದಾದ ಅವರು ಹೆಚ್ಚಾಗಿ ಓಡಾಡುತ್ತಿದ್ದರು. ಮೈಸೂರಿಗೆ ಬಂದಾಗ ಅಂಬರೀಶ್, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜೊತೆಗೂ ವಿಷ್ಣುವರ್ದನ್ ಅವರು ಕಾರಿನಲ್ಲಿ ಓಡಾಡುತ್ತಿದ್ದರು.
Key words: mysore, Dr. Vishnuvardhan, memorial, Blood donation, calendar, released