ಮೈಸೂರು,ಡಿಸೆಂಬರ್, 30,2020(www.justkannada.in): ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ್ ಪುತ್ಥಳಿ ದ್ವಂಸ ಪ್ರಕರಣ ಹಿನ್ನೆಲೆ ಈ ಕುರಿತು ಮಾತನಾಡಿರುವ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಬೀದಿ ಬೀದಿಯಲ್ಲಿ ವಿಷ್ಣು ಪುತ್ಥಳಿ ಇಡೋಕೆ ನಾನು ಇಷ್ಟ ಪಡಲ್ಲ. ಡಾ.ವಿಷ್ಣುವರ್ಧನ್ ಗೂ ಇಷ್ಟ ಇರಲಿಲ್ಲ. ಅಭಿಮಾನದಿಂದ ಇಡಬೇಕೆಂದ್ರೆ ಕೇಳಿ ಮಾಡಿ ಇಟ್ಟರೆ ಸಂತೋಷ ಎಂದು ಹೇಳಿದರು.
ಇಂದು ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ ಹಿನ್ನೆಲೆ. ಮೈಸೂರಿನ ಉದ್ಬೂರಿನಲ್ಲಿರುವ ವಿಷ್ಣು ಸಮಾಧಿಗೆ ಡಾ.ವಿಷ್ಣುವರ್ಧನ್ ಕುಟುಂಬ ಪೂಜೆ ಸಲ್ಲಿಸಿತು. ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ವಿಷ್ಣುವರ್ಧನ್ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು.
ವಿಷ್ಣುವರ್ಧನ್ ಬಗ್ಗೆ ಆಗಾಗ್ಗೆ ಅವಹೇಳನ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಯಾರ್ಯಾರು ಮನಸ್ಸಲ್ಲಿ ಏನೇನು ಇರುತ್ತೊ ಗೊತ್ತಿಲ್ವಲ್ಲ. ಅದು ಹೊರಗಡೆ ಬಂದಾಗ ತಾನೆ ಗೊತ್ತಾಗೋದು. ಏನೇ ಇದ್ರು ಅಕ್ಸೆಪ್ಟ್ ಮಾಡಿಕೊಂಡಾಗ, ನಮಗೆ ಆ ಭಾವನೆ ಇಲ್ಲದಾಗ ಎಲ್ಲಾ ಒಳ್ಳೆ ರೀತಿಯೇ ಕಾಣುತ್ತೆ. ವಿಷ್ಣು ಬಗ್ಗೆ ಏನೇ ಅಂದ್ರು ಒಳ್ಳೆ ಪಬ್ಲಿಸಿಟಿ ಆಗುತ್ತೆ, ಅದು ಅವರಿಗೆ ಗೊತ್ತಾಗಬೇಕು ಎಂದು ಡಾ.ವಿಷ್ಣುವರ್ಧನ್ ವಿರೋಧಿಗಳಿಗೆ ಟಾಂಗ್ ನೀಡಿದರು. ವಿಷ್ಣುವರ್ಧನ್ ನಮ್ಮನ್ನ ಬಿಟ್ಟು ಎಲ್ಲೂ ಹೋಗಿಲ್ಲ. ಪ್ರತ್ಯಕ್ಷವಾಗಿಲ್ಲ ಅಷ್ಟೆ, ಎಲ್ಲರ ಹೃದಯದಲ್ಲಿ ಅಜರಾಮರವಾಗಿದ್ದಾರೆ ಎಂದರು.
ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ ಭಾರತಿ ವಿಷ್ಣುವರ್ಧನ್. ಒಳ್ಳೆ ಪಾತ್ರ ಬಂದರೆ ಮಾತ್ರ ಅಭಿನಯಿಸುತ್ತೇನೆ. ಇಲ್ಲ ಅಂದ್ರೆ ನಟಿಸಲ್ಲ, ಅಭಿಮಾನಿಗಳ ಹಾರೈಕೆಯೊಂದಿಗೆ ಹೀಗೆ ಇರುತ್ತೇನೆ ಎಂದರು.
ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ ..?.
ಡಾ.ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಪುತ್ರಿ ಕೀರ್ತಿ ವಿಷ್ಣುವರ್ಧನ್, ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ ..? ಅಪ್ಪನ ಬಗ್ಗೆ ಯಾರು ಏನೆ ಅಂದ್ರು, ಏನೆ ಮಾಡುದ್ರು ಅವರ ಮೇಲಿನ ಅಭಿಮಾನ ಕಡಿಮೆಯಾಗಲ್ಲ. ಅಪ್ಪ ಎಂದಾಕ್ಷಣ ನನಗೆ ಪ್ರೀತಿ ನೆನಪಾಗುತ್ತೆ ಎಂದು ತಿಳಿಸಿದರು.
Key words: mysore- Dr. Vishnuvardhan- Remembrance- Bharati visnhuvardan