ಮಾವುತರು, ಕಾವಾಡಿಗರ ಕುಟುಂಬಕ್ಕೆ ಸ್ವತಃ ಉಪಹಾರ ಬಡಿಸಿದ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ

ಮೈಸೂರು,ಅಕ್ಟೋಬರ್, 11,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಸಡಗರ ಕಳೆಗಟ್ಟಿದ್ದು, ಮಾವುತರು ಕಾವಾಡಿಗರ ಕುಟುಂಬಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉಪಹಾರ ಕೂಟ ಏರ್ಪಡಿಸಿದ್ದಾರೆ.

ಪ್ರತಿ ವರ್ಷದಂತೆ ಈ ಭಾರಿಯು ಮಾವುತರು ಕಾವಾಡಿಗರ ಕುಟುಂಬ ಉಪಹಾರ ಆಯೋಜನೆ ಮಾಡಿದ್ದು, ಮಾವುತರು ಕಾವಾಡಿಗರ ಕುಟುಂಬಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಉಪಹಾರ ಬಡಿಸಿದರು.  ಶೋಭಾ ಕರಂದ್ಲಾಜೆ ಅವರಿಗೆ ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್, ಬಿಜೆಪಿ ಮುಖಂಡರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಶೋಭಾಕರಂದ್ಲಾಜೆ ಅವರು,  ಪ್ರತಿ ವರ್ಷದಂತೆ ಈ ವರ್ಷವೂ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಅದೇ ರೀತಿ ಕಾವಾಡಿಗರು ಮಾವುತರ ಕುಟುಂಬಕ್ಕೆ ಉಪಹಾರ ಬಡಿಸಿದ್ದೇನೆ. ದಸರಾ ವೇಳೆ ಮಾವುತರು ಕಾವಾಡಿಗರ ಕಾಡಿನಿಂದ ನಾಡಿಗೆ ಬರುತ್ತಾರೆ. ಮುಂಚೆ ಮಾವುತರು ಕಾವಾಡಿಗರಿಗೆ 3ಸಾವಿರ ಗೌರವ ಧನ ನೀಡಲಾಗುತ್ತಿತ್ತು. ಈ ವೇಳೆ ಮಾವುತರು ಕಾವಾಡಿಗರು ಪ್ರತಿಭಟನೆ ಮಾಡುತ್ತಿದ್ದರು. ನಾವು ಇದನ್ನ ಅವರಿಗೆ ಪ್ರತಿ ತಿಂಗಳು ಸಂಬಳ ನೀಡುವ ಕೆಲಸ ಮಾಡಿದೆವು. ಯಡಿಯೂರಪ್ಪನವರು ಇದ್ದಾಗ ಸರ್ಕಾರಕ್ಕೆ ಮನವಿ ಮಾಡಿ ಸಂಬಳ ಕೊಡಿಸುವ ಕೆಲಸ ಮಾಡಿದ್ವಿ. ಮಾವುತರು ಕಾವಾಡಿಗರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹೇಳಿದ್ದವು ಎಂದರು.

ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಪತ್ರಿಕಾ ಜಾಹಿರಾತು ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ , ದುಷ್ಠ ಶಕ್ತಿಗಳು ಯಾರು ಎಂಬುದನ್ನ ಸರ್ಕಾರ ತೀರ್ಮಾನ ಮಾಡಲ್ಲ ಜನ ತೀರ್ಮಾನ ಮಾಡುತ್ತಾರೆ. ಯಾರು ಸರ್ಕಾರದ ಹಣ, ಸಂಪತ್ತನ್ನ ಲೂಟಿ ಮಾಡುತ್ತಿದ್ದಾರೆ. ಯಾರು ಭಷ್ಟಾಚಾರವನ್ನೇ ಉಧ್ಯಮ ಮಾಡಿಕೊಂಡಿದ್ದಾರೆ. ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕು ದುಡ್ಡು. ಎಲ್ಲರದಲ್ಲೂ ದುಡ್ಡು ತಗೋಳ್ತಾರೆ ಅವರು ಯಾವ ದೃಷ್ಟರ ಬಗ್ಗೆ ಮಾತನಾಡ್ತಾರೆ ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು. ಇಂತಹ ಜಾಹಿರಾತಿಗೆ ಸರ್ಕಾರದ ಹಣ ಬಳಕೆ ಮಾಡಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಧರ್ಮಪತ್ನಿ ಸೈಟ್ ವಾಪಾಸ್ ಮಾಡಿದ್ರು. ಯಾಕೆ ಮಾಡಿದ್ರು ತಪ್ಪು ಮಾಡಿದ್ರಿ ಅದಕ್ಕೆ ವಾಪಾಸ್ ನೀಡಿದ್ರಿ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರೋದರ ಬಗ್ಗೆ ಇಡಿ ವರದಿ ನೀಡಿದೆ. ಪರಿಶಿಷ್ಟ ಪಂಗಡದ ಹಣವನ್ನ ಆಂಧ್ರ ಪ್ರದೇಶ, ಬಳ್ಳಾರಿ ಚುನಾವಣೆಗೆ ನೀಡಿರೋದರ ಬಗ್ಗೆ ವರದಿ ನೀಡಿದೆ. ಯಾರು ಸರ್ಕಾರವನ್ನ ಲೂಟಿ ಮಾಡಿತ್ತಿದ್ದಾರೆ. ಅಂತಹವರಿಗೆ ಸರ್ಕಾರದ ಇರಲಿಕ್ಕೆ ಅಧಿಕಾರ ಎಂದರು.

ನೀವೇನು ಬೇಕಿದ್ರೂ ಜಾಹಿರಾತು ನೀಡಬಹುದು. ಏನು ಬೇಕಾದರೂ ಭಾಷಣ ಮಾಡಬಹುದು ಸರ್ಕಾರ ನಿಮ್ಮ ಕೈಲಿದೆ. ಯಾರು ದುಷ್ಟರು ಯಾರು ಶಿಷ್ಟರು ಎಂಬುದನ್ನ ಜನ  ಗಮನಿಸುತ್ತಿದ್ದಾರೆ ಎಂದರು.

ಚುನಾವಣೆ ಆಯೋಗಕ್ಕೆ ದೂರು ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ತನಿಖೆ ನಡೆಯುತ್ತಿದೆ. ಈಗಾಗಲೇ ಇದರ ಬಗ್ಗೆ ದೂರು ನೀಡಿದ್ದೇವೆ. ಎಲ್ಲಾ ತನಿಖೆಗಳ ಬಳಿಕ ಸತ್ಯ ಹೊರ ಬರುತ್ತೆ ಎಂದರು.

Key words: mysore Dussehra, Shobha Karandhlaje,  breakfast, Mahuta, Kavadi