ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ: ನಾಡಿನ ಪರಂಪರೆ ಮತ್ತು ಮಹನೀಯರನ್ನ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು.

ಮೈಸೂರು,ಸೆಪ್ಟಂಬರ್,26,2022(www.justkannada.in): ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ .ಮಹಿಳೆ ಪ್ರಾಧಿನ್ಯತೆಯೇ ದಸರೆಯ ವಿಶೇಷ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ಬಳಿಕ ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಚಾಮುಂಡಿ ತಾಯಿಗೆ ನನ್ನ ಮನಸ್ಪೂರ್ವಕ ನಮಸ್ಕಾರಗಳು , ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಈ ವರ್ಷದ ದಸರಾ ಮಹೋತ್ಸವ ಉದ್ಘಾಟಿಸಿದ್ದು ಬಹಳ ಸಂತೋಷವಾಗಿದೆ. ನಾಡದೇವತೆ ಚಾಮುಂಡೇಶ್ವರಿ ಇದೇ ಸ್ಥಳದಲ್ಲಿ ಮಹಿಷಾನನ್ನ ಸಂಹಾರ ಮಾಡಿದ್ದಾಳೆ. ಎಲ್ಲರಿಗೂ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ. ಎಂದು ಭಾಷಣದಲ್ಲಿ ಉಲ್ಲೇಖಸಿದರು.

ದಸರಾ ಉದ್ಘಾಟನೆಗೆ ನನ್ನನ್ನ ಕರೆದಿದ್ದು ಸಂತಸ ತಂದಿದೆ. ಕಲಬುರುಗಿ ಸೂಫಿಸಂತರ ನಾಡಾಗಿತ್ತು. ಈ ರಾಜ್ಯ ಬಸವಣ್ಣ, ಅಲ್ಲಮಪ್ರಭು ಹಲವು ಸಂತರ ನಾಡು. ಭಕ್ತಿ,ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿ. ಬಸವಣ್ಣ ಅಲ್ಲಮಪ್ರಭು ಆದರ್ಶ ವ್ಯಕ್ತಿಗಳಾಗಿದ್ದರು. ಅವರ ವಚನ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ. ದಸರಾ ಪರಂಪರೆ ಇಂದಿಗೂ ಮುಂದುವರೆಯುತ್ತಿರುವುದು ನಮ್ಮ ಹೆಮ್ಮೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭವೋಪೂರಿತವಾಗಿ ದಸರಾ ಆಚರಿಸಲಾಗುತ್ತಿದೆ.  ರಾಣಿ ಅಬ್ಬಕ್ಕ ಕಿತ್ತೂರು ರಾಣಿ ಚನ್ನಮ್ಮರಂತಹ ವೀರವನಿತೆಯರಿದ್ದಾರೆ.

ಮೈಸೂರು ದಸರಾ ಭಾರತೀಯ ಸಂಸ್ಕೃತಿ ಪ್ರತೀಕ .  ಮಹಿಳೆ ಪ್ರಾಧಿನ್ಯತೆಯೇ ದಸರಾ ವಿಶೇಷ. ಈ ಪರಂಪರೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ಅವರು ಹೇಳಿದರು.

Key words: Mysore Dussehra – symbol – Indian –culture-President -Draupadi Murmu

ENGLISH SUMMARY….

Mysuru Dasara symbol of Indian culture: President Droupadi Murmu remembers heritage and greats of the land
Mysuru, September 26, 2022 (www.justkannada.in): “The Mysuru Dasara is a symbol of Indian culture and heritage. Female predominance is the speciality of Dasara,” observed President Droupadi Murmu.
Commencing her speech in Kannada after the inaugural ceremony, the Hon’ble President Droupadi Murmu offered her respects to Goddess Chamundeshwari and wished the gathering. “I am very happy for inaugurating the historic Mysuru Dasara. This is the land where Goddess Chamundeshwari killed Mahishasura. I pray the goddess to bless everyone,” she said.
I am blessed for inviting me to the Mysuru Dasara Mahotsava. Kalaburagi was the land of Sufi saints. This is the land where great people like Allama Prabhu and others have take birth. Karnataka is known for devotion and independence. Basavanna, and Allama Prabhu were ideals. There vachanas have paved way for democracy. It is also a matter of pride to see Dasara celebrations even today. Dasara is being celebrated with more grandeur this year due to the efforts of the State Government. Karnataka has also produced great women leaders like Rani Abbakka and Kittur Rani Chennamma.
“Mysuru Dasara is a symbol of Indian culture. I heartily thank the Chief Minister of Karnataka and all others for giving me an opportunity to take part in this world-renowned celebrations,” she said.
Keywords: Droupadi Murmu/ Mysuru Dasara/ inauguration