ಮೈಸೂರು,ಜೂ, 22,2019(www.justkannada.in): ಸುತ್ತೂರು ಮಠಕ್ಕೂ ಮೈಸೂರು ಅರಮನೆಗೂ ತಾತನ ಕಾಲದಿಂದಲೂ ವಿಶೇಷ ಬಾಂಧವ್ಯವಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಗನ್ಮೋಹನ ಪ್ಯಾಲೇಸ್ ನಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಜಯಂತೋತ್ಸವವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಹಾಗೂ ಮನು ಬಳಿಗಾರ್ ಅವರು ಇನ್ನಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ವಿದ್ಯಾರ್ಥಿಗಳಿಗೆ ಸುತ್ತೂರು ಮಠಕ್ಕೂ ಮೈಸೂರು ಅರಮನೆಗೂ ಇದ್ದ ನಂಟನ್ನ ಬಿಡಿಸಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ ಅವರ ಬಗ್ಗೆ ಮಾತನಾಡುವ ವೇಳೆ ಹಳೆಯ ನಂಟು ಬಿಚ್ಚಿಟ್ಟರು.
ನಮ್ಮ ತಾತ ನವರ ಕಾಲದಿಂದಲೂ ಮೈಸೂರು ರಾಜಮನೆತನಕ್ಕೂ ಸುತ್ತೂರು ಮಠಕ್ಕೂ ಉತ್ತಮ ನಂಟಿದೆ .ಇಂದು ನಾನು ಸುತ್ತೂರು ಶ್ರೀಗಳೊಂದಿಗೆ ವೇದಿಕೆ ಹಂಚಿಕೊಳ್ತಿರೋದು ನಿಜಕ್ಕೂ ಖುಷಿ ಆಗ್ತಿದೆ ಎಂದು ಯದುವೀರ್ ಸಂತಸ ವ್ಯಕ್ತಪಡಿಸಿದರು.
key words: mysore-dynasty –suttur math-relation- Yadavir