ಸ್ತ್ರೀ ಕುಲಕ್ಕೆ ಸಮಾನ ಹಕ್ಕು ಕೊಟ್ಟಿದ್ದು ಮೈಸೂರು ರಾಜ ಮನೆತನ :ರಘು ಕೌಟಿಲ್ಯ    

ಮೈಸೂರು, ಏ 16, 2024 :(www.justkannada.in news) ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಮತ ಬ್ಯಾಂಕ್‌ ಆಧಾರಿತ  ದೂರದೃಷ್ಟಿತ್ವ ಇಲ್ಲದ ಯೋಜನೆಗಳು ಭವಿಷ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ ,ನೂರಾರು ವರ್ಷಗಳ ದೂರದೃಷ್ಟಿತ್ವವನ್ನು ಇಟ್ಟುಕೊಂಡು ಯುಗ ಮರೆಯದ ಗ್ಯಾರಂಟಿ ನೀಡಿದ್ದು ಮೈಸೂರಿನ ರಾಜ ವಂಶಸ್ಥರಾದರೆ, ಬದುಕು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸಿ ಕೊಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಯವರದು ಯುಗ ಮೆಚ್ಚುವ ಕೊಡುಗೆಯಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.‌ ರಘು (ಕೌಟಿಲ್ಯ)ಹೇಳಿದರು.

ಮೈಸೂರು ಬ್ಯೂಟಿಶಿಯನ್‌ ವೆಲ್‌ಫೇರ್‌ ಅಸೋಸಿಯೇಶನ್  ವತಿಯಿಂದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬೆಂಬಲಿಸಲು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾಪೂರ್ವದಲ್ಲೇ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸೇರಿದಂತೆ ಮೈಸೂರಿನ ಆಳರಸರು ಸ್ಥಾಪಿಸಿದ ಅನೇಕ ಉದ್ದಿಮೆಗಳಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳ ಉದ್ದಿಮೆಗಳೂ ಸೇರಿದ್ದವು. ಮೈಸೂರು ಸ್ಯಾಂಡಲ್‌ ಸೋಪ್, ಮೈಸೂರು‌ ಗಂಧದ ಎಣ್ಣೆ, ಉತ್ಪನ್ನಗಳು ಇದರಲ್ಲಿ ಪ್ರಮುಖವಾಗಿದ್ದು, ಮೈಸೂರನ್ನು ಸಾಂಸ್ಕೃತಿಕ ನಗರಿಯನ್ನಾಗಿಸುವುದರ ಜೊತೆಗೆ ಸಾಂಪ್ರದಾಯಿಕ ಸೌಂದರ್ಯ ಪ್ರಜ್ಞೆ ಹೆಚ್ಚಿಸುವಲ್ಲಿಯೂ ಅವರ ಕೊಡುಗೆ ಮಹತ್ವದಾಗಿತ್ತು. ಅದೇ ಮಾದರಿಯಲ್ಲಿ  ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಮತದಾನದ ಹಕ್ಕು ಹಾಗೂ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟ ಕೀರ್ತಿ ಮೈಸೂರಿನ ಯದುವಂಶಕ್ಕೆ ಸೇರಬೇಕಾಗಿದೆ ಎಂದು ಅವರು ಹೇಳಿದರು.

ಮೈಸೂರಿನ ಯದುವಂಶದ ಅಸ್ತಿತ್ವವನ್ನು ಉಳಿಸಲು ಹಾಗೂ ಯಶಸ್ವಿ ಆಡಳಿತ ನಡೆಸಲು ಮಹಾರಾಣಿಯರು ಹಾಗೂ ರಾಜಮಾತೆಯರ. ತ್ಯಾಗ ಹಾಗೂ ಕೊಟ್ಟ ಕೊಡುಗೆಗಳು ಚಾರಿತ್ರಿಕ ಗೌರವಕ್ಕೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಹಾಗೂ ವಾಣಿವಿಲಾಸ ಸನ್ನಿಧಿ ಅವರ ಕೊಡುಗೆ ಭಾರತದ ಸ್ತ್ರೀಕುಲ ಹಾಗೂ ಮೈಸೂರಿನ ಇತಿಹಾಸ ಶಾಶ್ವತವಾಗಿ ಮರೆಯದಂತ ಕೊಡುಗೆಗಳಾಗಿವೆ.

ಆಧುನಿಕ ಶ್ರೀರಾಮನಂತೆ ಆಡಳಿತ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪರಿಪೂರ್ಣ ವ್ಯಕ್ತಿತ್ವವನ್ನು  ರೂಪಿಸುವಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನಾಲ್ವಡಿಯವರು ಅಧಿಕಾರಕ್ಕೆ ಬರುವ ಮೊದಲೇ ವ್ಯವಸ್ಥಿತ ಯೋಜನೆ ರೂಪಿಸಿದ ಹೆಗ್ಗಳಿಕೆ ವಾಣಿವಿಲಾಸ ಅವರಿಗೆ ಸಲ್ಲಬೇಕು. ಕನ್ನಂಬಾಡಿ ಕಟ್ಟೆ ಕಟ್ಟಲು ವಾಣಿವಿಲಾಸ ಸನ್ನಿಧಿ ಅವರು ಹಾಗೂ ಸೊಸೆ ಮಹಾರಾಣಿ ಪ್ರತಾಪ ಕುಮಾರಿ ಅವರು ಸಮರ್ಪಿಸಿದ ಚಿನ್ನದ ಆಭರಣಗಳಿಂದಾಗಿ ಅವರ ಚಿನ್ನದಂತಹ ವ್ಯಕ್ತಿತ್ವವನ್ನು ಶಾಶ್ವತವಾಗಿ ಜನ ನೆನೆಯುವಂತೆ ಅನಾವರಣಗೊಳಿಸಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

 

ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಕೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

 

ಪ್ರಧಾನಿ ಮೋದಿಯವರು ಮೈಸೂರು ಸಂಸ್ಥಾನದ ಪರಂಪರೆ ಇತಿಹಾಸವನ್ನು ತಿಳಿದು ಇಂತಹ ಶ್ರೇಷ್ಠ ಮನೆತನವನ್ನು ಹಾಗೂ ಪ್ರಜಾಪ್ರಭುತ್ವವನ್ನು ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಗೌರವಿಸಿ ತಮ್ಮ ರಾಜತ್ವವನ್ನು ಸಮರ್ಪಿಸಿದ ಪ್ರಜಾಪ್ರಭುತ್ವವಾದಿ ಮೈಸೂರು ರಾಜವಂಶಸ್ಥರು ಲೋಕಸಭೆಯನ್ನು ಪ್ರತಿನಿಧಿಸಬೇಕೆಂಬ ಕಳಕಳಿಯಿಂದ ಯದುವೀರರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆಂದು ರಘು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಎಸ್ .ಎ. ರಾಮದಾಸ್‌ ರವರು ಮಹಿಳಾ ಉದ್ಯಮಕ್ಕೆ ಮೋದಿಯವರು ಕೊಟ್ಟಿರುವ ಕೊಡುಗೆಗಳು ಹಾಗೂ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳ ವಿವರ ನೀಡಿದರು. ನಂತರ ಮಾತನಾಡಿದ  ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ ಅವರು ಮಹಿಳಾ ಶಕ್ತಿಯಿಂದ ಮಾತ್ರ ನಮ್ಮ ಎಲ್ಲ ರೀತಿಯ ಉದ್ಯಮಗಳು ಬೃಹತ್‌ ಆಗಿ ವಿಸ್ತರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಯದುವೀರ್‌ ಗೆದ್ದು ಬಂದರೆ ಮೈಸೂರಿನಲ್ಲಿ ಮಹಿಳಾ ಉದ್ಯಮಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಅನಿರೀಕ್ಷಿತ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗದ ಕಾರಣವನ್ನು ಮಾನ್ಯ ಮಾಡುವಂತೆ ವಿನಂತಿಸಿ ವಿಡಿಯೋ ಸಂದೇಶ ಕಳಿಸಿದ್ದ ತ್ರಿಶಿಕಾ ಕುಮಾರಿ ಒಡೆಯರ್ ಅವರು ಅತೀ ಶೀಘ್ರದಲ್ಲಿ ಮತ್ತೊಮ್ಮೆ ಬ್ಯೂಟಿಶಿಯನ್ಸ್‌ ಪದಾಧಿಕಾರಿಗಳನ್ನು ಬೇಟಿ ಮಾಡುವುದಾಗಿ ಹೇಳಿದ್ದಲ್ಲದೇ, ಯದುವೀರ್‌ ಅವರು ಗೆದ್ದ ನಂತರ ಮಹಿಳಾ ಉದ್ಯಮ ಬೆಳೆಯಲು ಹಾಗೂ ಮಹಿಳೆಯರ ಸಮಸ್ಯೆಗಳನ್ನು ಬಗೆ ಹರಿಸಲು ತಾವು ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದಾಗಿ ಹೇಳಿದರಲ್ಲದೇ ಯದುವೀರ್‌ ರವರನ್ನು ಬೆಂಬಲಿಸಿ, ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಮಾತನಾಡಿದರು,ಮೈಸೂರು ಬ್ಯೂಟಿಶಿಯನ್‌ ವೆಲ್‌ಫೇರ್‌ ಅಸೋಸಿಯೇಶನ್ಸ್‌ನ ಪದಾಧಿಕಾರಿಗಳಾದ ವೇದಾ ರೈ,ಉಮಾ ಜಾಧವ್  ಉಪಸ್ಥಿತರಿದ್ದರು, ವೇದಿಕೆ ಮೇಲೆ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಮಮತಾ ಶೆಟ್ಟಿ, ಪ್ರಮೀಳಾ ಭರತ್‌, ಚಂದ್ರಕಲಾ ಉಪಸ್ಥಿತರಿದ್ದರು

key words : Mysore, election, bjp, Raghu

 

He was speaking after inaugurating a programme organized by The Mysore Beautician Welfare Association to support BJP candidate Yaduveer Krishnadatta Chamaraja Wadiyar.