ಮೈಸೂರು,ನವೆಂಬರ್,15,2020(www.justkannada.in): ಶತಮಾನಗಳ ಇತಿಹಾಸವಿರುವ ಪ್ರತಿಷ್ಠಿತ ದಿ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದೆ.
2020-2025 ನೇ ಸಾಲಿನ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ನಗರದ ವಸ್ತುಪ್ರದರ್ಶನ ಆವರಣದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆಡಳಿತ ಮಂಡಳಿತ 13 ನಿರ್ದೇಶಕ ಸ್ಥಾನಗಳಿಗೆ 37 ಮಂದಿ ಸ್ಪರ್ಧಾ ಕಣದಲ್ಲಿದ್ದು, 43 ಬೂತ್ ಗಳಲ್ಲಿ ಮತಹಕ್ಕು ಚಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಹಾಲಿ, ಮಾಜಿ ನಗಪಾಲಿಕೆ ಸದಸ್ಯರೂ ಸಹ ಚುನಾವಣೆಗೆ ಸ್ಪರ್ಧಿಸಿದ್ದು, ಬೆಳಗ್ಗೆ 9ರಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆಯವರೆಗೆ ಮತಹಕ್ಕು ಚಲಾವಣೆಗೆ ಅವಕಾಶವಿದ್ದು ಸಂಜೆ ನಾಲ್ಕು ಗಂಟೆಯ ನಂತರ ಮತ ಎಣಿಕೆ ನಡೆಯಲಿದೆ. ರಾತ್ರಿ 9 ಗಂಟೆ ಒಳಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಚುನಾವಣೆ ವೇಳೆ ಕೋವಿಡ್ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, 250 ಹೆಚ್ವು ಚುನಾವಣಾ ಸಿಬ್ಬಂದಿ ಹಾಗೂ ಭದ್ರತೆಗೆ 150 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.
English summary…..
Elections for the City Cooperative Bank Administrative board today
Muysuru, Nov. 15, 2020 (www.justkannada.in): The elections for the City Cooperative Bank management for the year 2020-25 are being held today. Voting has been arranged at the exhibition grounds. In all 37 candidates are contesting for posts of 13 Directors. A total number of 43 booths have been established. The counting of votes will be held after completion of voting process at 4 pm and the results are expected to be announced around 9 pm today.
Keywords: The City Cooperative Bank-Board Elections-
—————————————–
Key words: mysore- Election – The City Co-operative Bank -today.