ದಳಪತಿಗಳ ಪ್ರತಿಷ್ಠೆ ಕಣ ‘ಮೈಮುಲ್‌’ ಗೆ ಇಂದು ಚುನಾವಣೆ: ಇಂದೇ ಫಲಿತಾಂಶ…

ಮೈಸೂರು,ಮಾರ್ಚ್,16,2021(www.justkannada.in) ದಳಪತಿಗಳ ಪ್ರತಿಷ್ಠೆ ಕಣ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆಯಲಿದೆ.jk

ಬನ್ನೂರು ರಸ್ತೆ ಮೆಗಾ ಡೈರಿ ಸಂಕೀರ್ಣದಲ್ಲಿ  ಮೈಮುಲ್ ಚುನಾವಣೆ ನಡೆಯಲಿದ್ದು,  ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕ‌ ಜಿಟಿ.ದೇವೇಗೌಡ ನಡುವೆ ಪ್ರತಿಷ್ಟೆಯ ಕಣವಾಗಿದೆ. ಮೈಸೂರು ಉಪ ವಿಭಾಗ ಮತ್ತು ಹುಣಸೂರು ಉಪ ವಿಭಾಗಕ್ಕೆ ಚುನಾವಣೆ ನಡೆಯಲಿದೆ.

ಮೈಸೂರು ಉಪ ವಿಭಾಗದಲ್ಲಿ 7 ಸ್ಥಾನಗಳಿಗೆ 14 ಜನ ಸ್ಪರ್ಧಿಸಿದರೇ ಹುಣಸೂರು ಉಪ ವಿಭಾಗದಲ್ಲಿ 8 ಸ್ಥಾನಗಳಿಗೆ 15 ಜನ ಸ್ಪರ್ಧಿಸಿದ್ದಾರೆ. ಇದು ಡೈರಿಯ ನಾಮನಿರ್ದೇಶನ ಪದಾಧಿಕಾರಿಗಳ ಮೂಲಕ ಆಯ್ಕೆಯಾಗುವ ಚುನಾವಣೆಯಾಗಿದ್ದು  431 ಮೈಸೂರು, 617 ಹುಣಸೂರು ಉಪವಿಭಾಗದ ಮತಗಳಿವೆ. ಒಟ್ಟು 1048 ಜನರು ಮತ ಚಲಾಯಿಸುವರು.

ಒಬ್ಬ ವ್ಯಕ್ತಿಯು ಮೈಸೂರು ಉಪವಿಭಾಗದಲ್ಲಿ 07 ಮತ್ತು ಹುಣಸೂರು ವಿಭಾಗದಲ್ಲಿ 08 ಮತ ಚಲಾವಣೆ ಮಾಡಬಹುದಾಗಿದೆ. ಇನ್ನು ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಆರಂಭವಾಗಲಿದ್ದು, ಸಂಜೆ 04 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿ ಇಂದೇ ಫಲಿತಾಂಶ ಹೊರಬೀಳಲಿದೆ. ಸಂಜೆ 8 ಗಂಟೆ ವೇಳೆಗೆ ಡೈರಿ ಅಧಿಪತ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ಶತಾಯಗತಾಯ ತಮ್ಮ ಬಣ ಗೆಲ್ಲಿಸಲು ಪ್ರಮುಖ ನಾಯಕರು ಪಣ ತೊಟ್ಟಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಬಣ ಸೋಲಿಸಲು  ತಂತ್ರ ರೂಪಿಸಿದ್ದು, ಜೆಡಿಎಸ್‌‌ನ ಎಲ್ಲಾ ಚಟುವಟಿಕೆಗಳಿಂದ ದೂರವಿರುವ ಜಿಟಿ ದೇವೇಗೌಡರ ಶಕ್ತಿ ಕುಗ್ಗಿಸಲು  ಜೆಡಿಎಸ್ ದಳಪತಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ಮೈಸೂರು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ತಮ್ಮದೇ ಹಿಡಿತ ಹೊಂದಿದ್ದಾರೆ, ಜಿಟಿಡಿ ಬಣ ಸೋಲಿಸಲು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೈಮುಲ್‌ ಚುನಾವಣೆಯ ಅಖಾಡ ಪ್ರವೇಶಿಸಿ ಸಭೆ, ಪ್ರಚಾರ ಮಾಡಿದ್ದಾರೆ.

mysore-Elections –MYMUL- Today- result-GT devegowda-hd kumaraswamy
ಕೃಪೆ-internet

ಇತ್ತ ನಿರ್ದೇಶಕ ಸ್ಥಾನಕ್ಕೆ ಶಾಸಕ ಕೆ.ಮಹದೇವ್ ಪುತ್ರ ಸ್ಪರ್ಧಿಸಿದ್ದು, ಶಾಸಕ ಮಹದೇವ್ ಅವರ ಮಗನನ್ನು ಸೋಲಿಸಲು ಸಾ.ರಾ.ಮಹೇಶ್‌ ತಂತ್ರ ರೂಪಿಸಿದ್ದು, ಕಾಂಗ್ರೆಸ್‌ ನ ಮಾಜಿ ಶಾಸಕ ವೆಂಕಟೇಶ್‌ ಜೊತೆ ಕೈ ಜೋಡಿಸಿರುವ ಆರೋಪ. ಕೇಳಿ ಬಂದಿದೆ. ಇದರಿಂದಾಗಿ ಶಾಸಕ ಕೆ.ಮಹದೇವ್  ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ENGLISH SUMMARY…..

‘MYMUL’ elections today: Results also to be announced today
Mysuru, Mar. 16, 2021 (www.justkannada.in): The Mysore Milk Union Limited (MYMUL) elections which has turned out to be a prestige between top JDS leaders will be held today.

mysore-Elections –MYMUL- Today- result-GT devegowda-hd kumaraswamy
ಕೃಪೆ-internet

The elections will be held at the MYMUL dairy located on Bannur Road in Mysuru and this election is said to have turned out to be a prestige issue for former Chief Minister H.D.Kumaraswamy and MLA G.T. Devegowda. Elections will be held for Mysuru Sub Division and Hunsur Sub Division.
Though this election is not held under the party symbol, both the leaders are said to have vowed to ensure that their candidates will win.
Key words: mysore-Elections –MYMUL- Today- result-GT devegowda-hd kumaraswamy

Key words: mysore-Elections –MYMUL- Today- result-GT devegowda-hd kumaraswamy