ಮೈಸೂರು,ಆಗಸ್ಟ್ ,24,2020(www.justkannada.in): ನಂಜನಗೂಡು ಟಿ.ಹೆಚ್ ಓ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಅಮಾನತು ಮಾಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರ ಅಂತ್ಯವಾದ ಹಿನ್ನೆಲೆ ಇಂದಿನಿಂದ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಡಾ. ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅಮಾನತಿಗೆ ಬಿಗಿ ಪಟ್ಟು ಹಿಡಿದ್ದಿದ್ದರು. ಈ ಮಧ್ಯೆ ಇಂದಿನಿಂದ ವೈದ್ಯಾಧಿಕಾರಿಗಳ ಸಂಘ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಆದರೆ ಇದೀಗ ನಿರ್ಧಾರ ಬದಲಿಸಿ ಮುಷ್ಕರ ಕೈಬಿಟ್ಟಿದ್ದು ವೈದ್ಯರು ಇಂದಿನಿಂದ ಸೇವೆಗೆ ಹಾಜರಾಗಲಿದ್ದಾರೆ.
ಈ ನಡುವೆ ತಮ್ಮ ಬೇಡಿಕೆ ಈಡೇರುವವರೆಗೂ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಲು ವೈದ್ಯರು ತೀರ್ಮಾನಿಸಿದ್ದಾರೆ. ವೈದ್ಯರ ಮುಷ್ಕರದಿಂದಾಗಿ ಕೋವಿಡ್ 19 ಚಿಕಿತ್ಸಾ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿತ್ತು. ಕಳೆದ ಎರಡು ದಿನಗಳಿಂದ ಸರ್ಕಾರಕ್ಕೆ ಮೈಸೂರು ಜಿಲ್ಲೆಯ ಕೋವಿಡ್ ಅಂಕಿ ಸಂಖ್ಯೆಗಳ ವರದಿ ಸಲ್ಲಿಕೆಯಾಗಿರಲಿಲ್ಲ.
Key words: mysore -end –doctor- strike-Attend -duty -today.