ಮೈಸೂರು: ಅಬಕಾರಿ ಅಕ್ರಮ, ಇಬ್ಬರ ಬಂಧನ

ಮೈಸೂರು, ಏಪ್ರಿಲ್ 22,2020: ಕೋವಿದ್-19 ತಡೆಗಟ್ಟುವ ಹಿನ್ನಲೆ ನಗರದಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಏಪ್ರಿಲ್ 25 ರಂದು ರಾತ್ರಿ ಜಿಲ್ಲಾ ವಿಚಕ್ಷಣ ದಳ ಹಾಗೂ ಮೈಸೂರು ವಲಯ-3 ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ನಗರದ ವಿಜಯನಗರ ಮತ್ತು ರಿಂಗ್ ರಸ್ತೆ ಪ್ರದೇಶಗಳಲ್ಲಿ ಎರಡು ಪ್ರತ್ಯೇಕ ದಾಳಿ ನಡೆಸಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟಕ್ಕಾಗಿ 02 ವ್ಯಕ್ತಿಗಳನ್ನು ದಸ್ತಗಿರಿ ಮಾಡಿ, ಅವರಿಂದ 16.800 ಲೀ. ಮದ್ಯ ಹಾಗೂ 01 ದ್ವಿ-ಚಕ್ರ ವಾಹವನ್ನು ವಶಪಡಿಸಿಕೊಳ್ಳಲಾಗಿದ್ದು, 02 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪ್ಪಿಸಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಎಂ.ಎಸ್. ಮುರುಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.