ಮೈಸೂರು,ಅಕ್ಟೋಬರ್,10,2023(www.justkannada.in): ಇಸ್ರೇಲ್ ಮೇಲೆ ಪ್ಯಾಲಸ್ತೈನ್ ಹಮಾಸ್ ಉಗ್ರರು ರಾಕೆಟ್ ದಾಳಿ ಮಾಡಿದ ನಂತರ ಇಸ್ರೇಲ್ ಮತ್ತು ಪ್ಯಾಲಸ್ತೈನ್ ನಡುವೆ ಯುದ್ಧ ಶುರುವಾಗಿದ್ದು ಯುದ್ದಪೀಡಿತ ಪ್ರದೇಶದಲ್ಲಿ ಕನ್ನಡಿಗರು ಸಿಲುಕಿದ್ದಾರೆ.
ಈ ನಡುವೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ಕುಟುಂಬವೊಂದು ಯುದ್ಧಪೀಡಿತ ಇಸ್ರೇಲ್ ನಲ್ಲಿ ಸಿಲುಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೇವನೂರು ಗ್ರಾಮದ ಚೇತನ್ ಮತ್ತು ಪತ್ನಿ ಶಿಲ್ಪಶ್ರೀ ಹಾಗೂ ಒಂದುವರೆ ವರ್ಷದ ಮಗು ಇಸ್ರೇಲ್ ನಲ್ಲಿ ಸಿಲುಕಿದ್ದು ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ಎರಡು ವರ್ಷದ ಹಿಂದೆ ಚೇತನ್ ಉನ್ನತ ಅಧ್ಯಯನಕ್ಕಾಗಿ ಇಸ್ರೇಲ್ ಗೆ ತೆರಳಿದ್ದರು. ಕಳೆದ ಮಾರ್ಚ್ ನಲ್ಲಿ ಪತ್ನಿ ಶಿಲ್ಪಶ್ರೀ ಮತ್ತು ಮಗುವನ್ನೂ ಕರೆಸಿಕೊಂಡಿದ್ದರು ಎನ್ನಲಾಗಿದೆ.
Key words: Mysore- family –Israel- war