ಮೈಸೂರು,ಆ,15,2020(www.justkannada.in): ಗ್ರಾಮೀಣ ಬದುಕನ್ನು ನುಚ್ಚುನೂರು ಮಾಡುವಂತಹ ಕೃಷಿ ಕ್ಷೇತ್ರದಿಂದ ರೈತರನ್ನು ಒಕ್ಕಲೆಬ್ಬಿಸುವ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಸರ್ಕಾರ ಜಾರಿಗೆ ತರುತ್ತಿದೆ. ಈ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನುಚ್ಚುನೂರು ಮಾಡುವ ಕಾರ್ಯಕ್ಕೆ ಮುಂದಾಗಿವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೈಸೂರಿನ ಗಾಂಧಿ ಪ್ರತಿಮೆಯ ಮುಂದೆ ರಾಷ್ಟ್ರಧ್ವಜ ಹಿಡಿದು ಭಾರತ ಮಾತೆಗೆ ಜಯವಾಗಲಿ ಎಂದು ಘೋಷಣೆ ಕೂಗಿ ರಾಷ್ಟ್ರಗೀತೆ ಹಾಡು ಗೌರವ ಸಲ್ಲಿಸಿದ ನಂತರ ರೈತ ಮುಖಂಡರು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ಮೌನ ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನ ಆಚರಿಸಿದರು.
ಗ್ರಾಮೀಣ ಬದುಕನ್ನು ನುಚ್ಚುನೂರು ಮಾಡುವಂತಹ ಕೃಷಿ ಕ್ಷೇತ್ರದಿಂದ ರೈತರನ್ನು ಒಕ್ಕಲೆಬ್ಬಿಸುವ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಸರ್ಕಾರದ ವಿರುದ್ಧ ರೈತರು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ಕುರುಡು ಸರ್ಕಾರದ ನಿರ್ಧಾರದ ವಿರುದ್ಧ ಮೌನ ಪ್ರತಿಭಟನಾ ಧರಣಿ ನಡೆಸಲಾಯಿತು.
ಮೌನ ಪ್ರತಿಭಟನೆಯ ನೇತೃತ್ವ ವಹಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸಿಗೆ ವಿರುದ್ಧವಾಗಿ ಆಳುವ ಸರ್ಕಾರಗಳು ರೈತ ವಿರೋಧಿ ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ಜಾರಿ ಮಾಡುವ ಮೂಲಕ ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು ಮುಂದಾಗಿವೆ. ಕಾರ್ಪೊರೇಟ್ ಕಂಪನಿಗಳ ಭೂ ಮಾಫಿಯಾದವರ ಹಂಗಿನಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಈ ಕಾಯ್ದೆಗಳ ಜಾರಿಯಿಂದ ಶೇಕಡ ಎಂಬತ್ತರಷ್ಟು ಸಣ್ಣ ಸಣ್ಣ ರೈತರು ಕೃಷಿ ಭೂಮಿ ಕಳೆದುಕೊಂಡು ಕೃಷಿಯಿಂದ ದೂರವಾಗುವ ಸಂದರ್ಭವನ್ನು ಸೃಷ್ಟಿ ಮಾಡುತ್ತಿದ್ದಾರೆ ಈಗಾಗಲೇ ಕೃಷಿ ಭೂಮಿ ಕಳೆದುಕೊಂಡ 22 ಲಕ್ಷ ಹೆಕ್ಟೇರ್ ಭೂಮಿ ರೈತರು ಕೂಲಿಕಾರರಾಗಿ ದುಡಿಯುತ್ತಿದ್ದಾರೆ ಇಂತಹದೇ ಸ್ಥಿತಿಯನ್ನು ರೂಪಿಸಲು ಸರ್ಕಾರ ಕಾಯ್ದೆಗಳನ್ನು ಆತುರ ಆತುರವಾಗಿ ತಿದ್ದುಪಡಿ ಮಾಡಿ ಜಾರಿಗೆ ತರುತ್ತಿದೆ. ಗ್ರಾಮ ಸ್ವರಾಜ್ಯದ ಕನಸನ್ನು ನುಚ್ಚುನೂರು ಮಾಡುವ ಕಾರ್ಯಕ್ಕೆ ಮುಂದಾಗಿವೆ ಎಂದು ಕಿಡಿಕಾರಿದರು.
ಮುಂದಿನ ದಿನಗಳಲ್ಲಿ ಹಳ್ಳಿ ಜನರನ್ನು ಜಾಗೃತಿ ಮೂಡಿಸಲು ಮನೆಮನೆಗೆ ಕರಪತ್ರ ಹಂಚುವ ಜಾಗೃತಿ ಸಭೆ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ರಾಜ್ಯಾದ್ಯಂತ ನಮ್ಮೂರ ಭೂಮಿ ನಮಗಿರಲಿ ಅನ್ಯರಿಗೆ ಅಲ್ಲ ಆಂದೋಲನ ಸಮಿತಿಯಿಂದ ಈ ಕಾರ್ಯವನ್ನು ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಜಿಲ್ಲಾಧ್ಯಕ್ಷ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಹಾಡ್ಯ ರವಿ ರಾಮೇಗೌಡ ರವೀಂದ್ರ ಕೃಷ್ಣೇಗೌಡ ಬರಡನಪುರ ನಾಗರಾಜ್ ಮಹದೇವಸ್ವಾಮಿ ಮಂಜುನಾಥ್ ರಂಗರಾಜು ಕೃಷ್ಣಪ್ಪ ಗಣಗರಹುಂಡಿ ವೆಂಕಟೇಶ್ ಪರಶಿವಮೂರ್ತಿ ಅಪ್ಪಣ್ಣ ವೀರೇಶ ಮುಂತಾದವರು ಸೇರಿ ನೂರಾರು ರೈತರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Key words: mysore-farmer –leader- Silent protest- against- govrnament