‘ಎನ್.ಆರ್ ಠಾಣೆಗೂ ಕಲ್ಲು ಹೊಡೆಯುತ್ತೇವೆ’: ಪೊಲೀಸ್ ಸಿಬ್ಬಂದಿಗೆ ಅವಾಜ್:  12 ಮಂದಿ ವಿರುದ್ದ FIR

ಮೈಸೂರು,ಏಪ್ರಿಲ್,3,2025 (www.justkannada.in):  ಉದಯಗಿರಿ ಠಾಣೆ ಮೇಲೆ ಕಲ್ಲು ಬೀಸಿದಂತೆ ಎನ್.ಆರ್ ಠಾಣೆಗೂ ಕಲ್ಲು ಹೊಡೆಯುತ್ತೇವೆ ಎಂದು ಅವಾಜ್ ಹಾಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ 12 ಮಂದಿ ವಿರುದ್ದ ಮೈಸೂರಿನಲ್ಲಿ ಎಫ್ ಐಆರ್ ದಾಖಲಾಗಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಆವಾಜ್ ಹಾಕಿದ ಆರೋಪದ ಮೇಲೆ ಮಾದೇಶ್, ಗಿರೀಶ್, ಆ. ಬ್ಲೆಡ್, ರವಿಕುಮಾರ್, ಕಿರಣ್, ಆ.ಬಾತು, ರಾಘವೇಂದ್ರ, ದಾದಾ, ಕೀರ್ತಿ, ನಾಗೇಂದ್ರ ಸೇರಿ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಯುಗಾದಿ ಹಬ್ಬದಂದು ಗಾಂಧಿನಗರದ ದುರ್ಗಾದೇವಿ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ದುರ್ಗಾದೇವಿ ಮೆರವಣಿಗೆ ವೇಳೆ ಎರಡು ಗುಂಪಿನ ಯುವಕರ ನಡುವೆ ಪರಸ್ಪರ ಗಲಾಟೆಯಾಗಿದೆ. ಈ ವೇಳೆ ಜಗಳ ಬಿಡಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ತಿರುಗಿಬಿದ್ದ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದೆ.

ಅಲ್ಲದೆ ಉದಯಗಿರಿ ಠಾಣೆ ಮೇಲೆ ಕಲ್ಲು ಎಸೆದಂತೆ ಎನ್.ಆರ್ ಠಾಣೆ ಮೇಲೂ ಕಲ್ಲು ಹೊಡೆಯುತ್ತೇವೆ ಎಂದು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇದೀಗ 12 ಮಂದಿ ವಿರುದ್ದ ಎಫ್ ಐಆರ್ ದಾಖಲಾಗಿದೆ.

Key words: Mysore, NR police station, police, FIR, against, 12 people