ಮೈಸೂರು,ಆ,4,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೇ ಇನ್ನೊಂದೆಡೆ ಪ್ರವಾಹದ ಭೀತಿ ಎದುರಾಗಿದೆ.
ಕಬಿನಿ ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದ ಮುನ್ಸೂಚನೆ ಎದುರಾಗಿದೆ. ಈ ಹಿನ್ನೆಲೆ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಸೂಚನೆ ನೀಡಿದೆ.
ನದಿಯಲ್ಲಿ ಪ್ರಸ್ತುತ ಒಳಹರಿವು 10,000 ಕ್ಯೂಸೆಕ್ ಇದ್ದು ಹೊರ ಹರಿವಿನ ಪ್ರಮಾಣ 2000 ಕ್ಯೂಸೆಕ್ ಆಗಿದೆ.ಇಂದು ಹೊರಹರಿವು 16,000 ಕ್ಯೂಸೆಕ್ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಕಬಿನಿ ನದಿ ಪಾತ್ರ, ಎರಡೂ ದಂಡೆಯಲ್ಲಿರುವ ಜನರಿಗೆ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆ ಹಾಗೂ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
Key words: mysore-Flood – Kapila River– instructed -move – safe place-DC- Abhiram je shankar