140 ಸ್ಥಾನ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ- ಮಾಜಿ ಸಿಎಂ ಬಿಎಸ್ ವೈ ವಿಶ್ವಾಸ.

ಮೈಸೂರು,ಮಾರ್ಚ್,30,2022(www.justkannada.in):  ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. 140 ಸ್ಥಾನ ಪಡೆದು ಮತ್ತೆ ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುತ್ತೂರು ಮಠದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ,  ಏ.1 ರಂದು ರಾಜ್ಯಕ್ಕೆ ಅಮಿತ್ ಶಾ ಬರುತ್ತಾರೆ. ಏಪ್ರಿಲ್ 1 ರ ಬಳಿಕ ರಾಜ್ಯಾದ್ಯಂತ ಬಿಜೆಪಿ ನಾಯಕರ ಪ್ರವಾಸ ಆರಂಭವಾಗಲಿದೆ.  ಮೂರ್ನಾಲು ತಂಡಗಳಾಗಿ ಪ್ರವಾಸ ಕೈಗೊಳ್ಳಲಾಗುತ್ತದೆ. ರಾಜ್ಯದ ಬಿಜೆಪಿ ಗೆ ಅನುಕೂಲಕರ ವಾತಾವರಣವಿದೆ.  ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಊಹಾಪೂಹಗಳಿಗೆ ಕಿವಿಕೊಡಬೇಡಿ ಎಂದರು.

ವಿಜಯೇಂಧ್ರ ಸಂಪುಟ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ವೈ,  ಈ ಬಗ್ಗೆ ನಾನು ಯಾವುದೇ ಚರ್ಚೆ ಮಾಡಿಲ್ಲ ಎಂದರು.

Key words: mysore-Former cm-BS Yeddyurappa

ENGLISH SUMMARY….

“BJP will emerge victorious again with 140 seats”: Former CM BSY exudes confidence
Mysuru, March 30, 2022 (www.justkannada.in): “The BJP will emerge as the single highest seat winning party with 140 seats in the State again and will come to power in the state,” said former Chief Minister B.S. Yediyurappa.
He visited the Suttur Srimath in Mysuru today, where he informed that the BJP supremo Amit Sha will visit Karnataka on April 1. “After that, the BJP leaders yatra will begin across the State, in 3-4 teams. There is a pro-BJP wave in the country. The BJP in Karnataka will face the assembly elections under the leadership of Bommai I request all the people not to listen to rumors,” he added.
In his reply to a question on the inclusion of his son Vijendra into the cabinet, BSY said, “I have not discussed anything about it.” In his reply to the question on conducting elections earlier, he said there is no such environment as of now.
Keywords: Former CM B.S. Yediyurappa/ assembly elections/ BJP victory/ 140 seats