ಮೈಸೂರು,ಡಿಸೆಂಬರ್,3,2020(www.justkannada.in): ಈಗಲೂ ಹೇಳ್ತೇನೆ ಬಿಎಸ್ ವೈರನ್ನ ಬಿಜೆಪಿ ಹೈಕಮಾಂಡ್ ಬದಲಾಯಿಸ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ, ನನ್ನ ಪ್ರಕಾರ ಬಿಎಸ್ ವೈರನ್ನ ಬದಲಾವಣೆ ಮಾಡುತ್ತಾರೆ. ಈ ವಿಷಯ ಕಲೆ ಹಾಕಲು ಬೇಕಾದಷ್ಟು ಸುದ್ದಿಮೂಲಗಳು ಇವೆ. ಬಿಜೆಪಿ ನಾಯಕರು ಸಂಪರ್ಕದಲ್ಲೇ ಇರಬೇಕು ಎಂದು ಏನಿಲ್ಲ. ಈ ಬಗ್ಗೆ ಒಂದು ತಿಂಗಳ ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ ಬಿಎಸ್ ವೈರನ್ನ ಬದಲಾಯಿಸುತ್ತಾರೆ ಎಂದರು.
ಬಿ.ಸಿ ಪಾಟೀಲ್ ರದ್ದು ಬೇಜವಾಬ್ದಾರಿ ಹೇಳಿಕೆ…
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದ ಸಚಿವ ಬಿ.ಸಿ ಪಾಟೀಲ್ ಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಬಿ.ಸಿ ಪಾಟೀಲ್ ರದ್ದು ಬೇಜವಾಬ್ದಾರಿ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಬಾರದು. ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಕಿಡಿಕಾರಿದರು.
ಜಿಟಿಡಿ ಹಣ ಪಡೆದು ಬಿಜೆಪಿಗೆ ಬೆಂಬಲಿಸಿದ್ಧರೆಂಬ ಹೇಳಿಕೆ ಕುರಿತು ಸ್ಪಷ್ಟನೆ…
ಇನ್ನು ಲೋಕಸಭಾ ಚುನಾವಣೆಯಲ್ಲಿ ಶಾಸಕ ಜಿ.ಟಿ ದೇವೇಗೌಡ ಹಣ ಪಡೆದು ಬಿಜೆಪಿ ಬೆಂಬಲಿಸಿದ್ದಾರೆ ಎಂಬುದಾಗಿ ನಾನು ಹೇಳಿಲ್ಲ. ನಾನು ಹೇಳಿದ್ದು ಬೇರೆ. ಸಭೆಯಲ್ಲಿ ಹೇಳಿದ್ದನ್ನ ಬಹಿರಂಗವಾಗಿ ಹೇಳುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದ್ದಿದ್ದವು. ಮೈತ್ರಿ ಮಾಡಿಕೊಳ್ಳದಿದ್ದರೇ 5 ರಿಂದ 6 ಸ್ಥಾನ ಗೆಲ್ಲಬಹುದಿತ್ತು ಎಂದು ಹೇಳಿಕೆ ನೀಡಿದ್ದೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ವಿಶ್ವನಾಥ್ ಹೇಳಿದ ದೊಡ್ಡ ಮೊತ್ತದ ಬಗ್ಗೆ ತನಿಖೆಯಾಗಬೇಕು…
ಹುಣಸೂರು ಉಪಚುನಾವಣೆ ವೇಳೆ ಚುನಾವಣಾ ಖರ್ಚಿಗಾಗಿ ದೊಡ್ಡ ಮೊತ್ತದ ಹಣ ನೀಡಲಾಗಿತ್ತು. ಅದನ್ನ ಸಿ.ಪಿ ಯೋಗೇಶ್ವರ್ ಮತ್ತು ಸಂತೋಷ್ ಲೂಟಿ ಮಾಡಿದ್ದಾರೆ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಹೆಚ್.ವಿಶ್ವನಾಥ್ ನನಗೆ ದೊಡ್ಡ ಮೊತ್ತ ಬಂದಿತ್ತು ಎಂದು ಹೇಳಿದ್ದಾರೆ. ಆ ದೊಡ್ಡ ಮೊತ್ತ ವೈಟ್ ಮನಿ ನಾ ಅಥವಾ ಬ್ಲಾಕ್ ಮನಿನಾ..? ಎಲ್ಲಿಂದ ಬಂತು ಇದೆಲ್ಲಾ ಜನರಿಗೆ ತಿಳಿಯಬೇಕು. ಹೀಗಾಗಿ ಈ ಬಗ್ಗೆ ತನಿಖೆಯಾಗಿಲಿ ಎಂದು ಆಗ್ರಹಿಸಿದರು.
Key words: mysore- former cm- siddaramaiah- CM’s- change-statement