ದಲಿತ ಮುಖ್ಯಮಂತ್ರಿ ವಿಚಾರ ಅಲ್ಲಗಳೆದ ಸಿದ್ದರಾಮಯ್ಯ: ಮಂತ್ರಿ ಗಿರಿಗಾಗಿ ಮತ ಕೇಳ್ತಾ ಇರೋ ಬಿಜೆಪಿ ನಿಲುವನ್ನು ಜನ ಒಪ್ಪಲ್ಲ ಎಂದು ಕಿಡಿ…

ಮೈಸೂರು,ಡಿ,3,2019(www.justkannada.in):  ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 9ರ ನಂತರ ಸಿಹಿ ಹಂಚುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ  ದಲಿತ ಮುಖ್ಯಮಂತ್ರಿ ವಿಚಾರ ಅಲ್ಲೆಗೆಳೆದ ಮಾಜಿ ಸಿಎಂ  ಸಿದ್ದರಾಮಯ್ಯ, ರಾಜ್ಯದಲ್ಲಿ ಅಂತಹ ಯಾವುದೇ ವಿದ್ಯಮಾನ ಇಲ್ಲ. ಸಿಹಿ ಹಂಚುತ್ತಾರೆ ಎಂದರೆ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಅಂತ ಅರ್ಥ. ಕುಮಾರಸ್ವಾಮಿ ಏನು ಭಾಷಣ ಮಾಡಿದ್ದಾರೋ ಗೊತ್ತಿಲ್ಲ. ನಿಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧವೇ ತಿರುಗಿ ಬಿದ್ದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸನ್ನ ವೈಟ್ ವಾಶ್ ಮಾಡ್ತಾರೆ ಎಂಬ ಶ್ರೀನಿವಾಸ್ ಪ್ರಸಾದ್  ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ ಗೆ ಇನ್ನೂ ಬುದ್ದಿ ಬಂದಿಲ್ಲ. ನಂಜನಗೂಡು ಉಪಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು ಯಾರು..? ಬಿಜೆಪಿಯಿಂದ ಸ್ಪರ್ಧೆ ಮಾಡಿ ನಂಜನಗೂಡಿನಲ್ಲಿ ಸೋತರು. ಅವರ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡೊಕಾಗಲ್ಲ ಎಂದು ಕುಟುಕಿದರು.

ಮಂತ್ರಿ ಗಿರಿಗಾಗಿ ಮತ ಕೇಳ್ತಾ ಇರೋ ಬಿಜೆಪಿ ನಿಲುವನ್ನು ಜನ ಒಪ್ಪಲ್ಲ. ಅವರು ದುಡ್ಡಿಗೆ ತಮ್ಮನ್ನು ಮಾರಿಕೊಂಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಚುನಾಯಿತ ಸರ್ಕಾರ ಬೀಳಿಸದವರೆಂದು‌ ಇವರ ಬಗ್ಗೆ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಾಂತರಿಗಳಿಗೆ ಪಾಠ ಕಲಿಸಲು‌ ಜನ ಕಾಯ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು ಎಂದು ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಸಿಕ್ಕಾಪಟ್ಟೆ ದುಡ್ಡು ಕೊಟ್ಟಿದ್ದಾರೆ. ಇವರೆಲ್ಲ ಮತದಾರರಿಗೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಬೇಕಾದಷ್ಟು ಹಣ ಖರ್ಚು ಮಾಡುತ್ತಿದ್ದಾರೆ.  ಆದರೆ ಜನ ದುಡ್ಡಿಗೆ ಕರಗುವುದಿಲ್ಲ.  ಆದ್ದರಿಂದಲೇ ನಾನು ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ದುಡ್ಡು, ಕಾಂಗ್ರೆಸ್‌ಗೆ ವೋಟು ಅಂತ ಹೇಳಿದ್ದೇನೆ.  ಪ್ರಚಾರದ ಕೊನೆಯ ದಿನಕ್ಕೆ ತಲುಪಿದ್ದೇವೆ. ಎಷ್ಟು ಕ್ಷೇತ್ರ ಗೆಲ್ಲುತ್ತೇವೆ ಎನ್ನುವುದು ಪ್ರಶ್ನೆಯೇ ಅಲ್ಲ. ಎಲ್ಲ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Key words: mysore –former cm- siddaramaiah- dalith cm