ಮೈಸೂರು,ಡಿಸೆಂಬರ್,18,2020(www.justkannada.in): ಸಮ್ಮಿಶ್ರ ಸರ್ಕಾರ ಬೀಳಲು ಸಿದ್ಧರಾಮಯ್ಯ ಕಾರಣ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಾನು ಸಮ್ಮಿಶ್ರ ಸರ್ಕಾರ ಬೀಳಿಸಬೇಕು ಅಂತಿದ್ರೆ ಕುಮಾರಸ್ವಾಮಿ ಸಿಎಂ ಆಗೋಕೆ ಬಿಡ್ತಿರಲಿಲ್ಲ. ನಾನು ಕುಮಾರಸ್ವಾಮಿ ಬೇಡ ಅಂತ ಹಠ ಹಿಡಿದು ಕೂತಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ನ…? ಇವನು ತಾಜ್ವೆಸ್ಟೆಂಡ್ ಹೊಟೇಲ್ ಕೂತ್ಕೊಂಡು ಅಧಿಕಾರ ಕಳ್ಕೊಂಡ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಗ್ರಾಮ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕರಿಗೆ ಸೂಕ್ತವಾಗಿ ಸ್ಪಂದಿಸಿದ್ರೆ ನಮ್ಮ ಎಂಎಲ್ಎಗಳು ಯಾರೂ ಬಿಜೆಪಿಗೆ ಹೋಗ್ತಿರಲಿಲ್ಲ. ಕುಣಿಯಲಾರದವವಳು ನೆಲ ಡೋಂಕು ಅಂದಾಗೆ ಮಾತನಾಡುತ್ತಾನೆ. ಒಂದು ಕಡೆ ನನಗೆ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು, ಅದಕ್ಕೆ ಫಾರಿನ್ ಗೆ ಹೋದೆ ಅಂತಾನೆ. ಇನ್ನೊಂದು ಕಡೆ ಸಿದ್ದರಾಮಯ್ಯ ಬೀಳುಸ್ತಾ ಅಂತಾನೆ. ಇವನಿಗೆ ರಾಜಕೀಯ ಪ್ರಬುದ್ದತೆ ಇದ್ಯ. ಎಂಎಲ್ಎ ಗಳನ್ನ ಸರಿಯಾಗಿ ನಡೆಸಿಕೊಂಡಿದ್ರೆ ಈ ರೀತಿ ಆಗ್ತಿರಲಿಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.
ಆಗ ಬಿಎಸ್ ವೈ ಚೆಕ್ ಮೂಲಕ, ಈಗ ಪುತ್ರ RTGS ಮೂಲಕ ಲಂಚ….
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದ. ಆದರೆ ಅವರ ಮಗ ವಿಜಯೇಂದ್ರ RTGS ಮುಖಾಂತರ ತಗೋತ್ತಾನೆ. ಬರೋಬ್ಬರಿ 7ಕೋಟಿ 40ಲಕ್ಷ ಹಣ ತೆಗೆದುಕೊಂಡಿದ್ದಾನೆ. ರಾಜ್ಯದಲ್ಲಿ ಲೂಟಿ ಹೊಡೆಯುವ ಕೆಲಸ ಆಗ್ತಿದೆ. RTGS ಮೂಲಕ ದುಡ್ಡು ತಗೋಳವ್ನಿಗೆ ಜೈಕಾರ ಹಾಕ್ತಾರೆ. ಏನ್ರಿ ಹೀಗೆ ಆದ್ರೆ ಸಮಾಜ ಉಳಿಯುತ್ತ. ದುಡ್ಡಿಲ್ಲದೆ ಈ ಸರ್ಕಾರದಲ್ಲಿ ಟ್ರಾನ್ಸ್ಫರ್ ನಡೆಯಲ್ಲ ಎಂದು ಆರೋಪಿಸಿದರು.
ಗೋಮಾತೆ ಪೂಜೆ ಮಾಡುವ ನಾಯಕರು ಯಾವತ್ತಾದ್ರು ಸಗಣಿ ಎತ್ತಿದ್ದಾರಾ….?
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಡಕಲು, ವಯಸ್ಸಾದ ಹಸುಗಳನ್ನ ರೈತರು ಏನ್ ಮಾಡಬೇಕು. ಇದನ್ನ ಪ್ರಶ್ನಿಸಿದ್ರೆ ಅಶೋಕ ನಮ್ಮ ಮನೆಗೆ ಕಳಿಸಿ ಅಂತಾನೆ. ದುಡ್ಡು ಕೊಟ್ಟು ತಕೊಳಪ್ಪ ಅಂದ್ರೆ ಉಸಿರಿಲ್ಲ. ಗೋಮಾತೆ ಪೂಜೆ ಮಾಡುವ ನಾಯಕರು ಯಾವತ್ತಾದ್ರು ಸಗಣಿ ಎತ್ತಿದ್ದಾರಾ..? ಮೇಯಿಸಿ, ಹುಲ್ಲು ಹಾಕಿ ಹಾಲು ಕರೆದು ಡೈರಿಗೆ ಹಾಕಿದ್ದಾರಾ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ನಾಳೆಯಿಂದಲೇ ಎಲ್ಲರೂ ಕ್ಯಾಂಪೇನ್ ಆರಂಭ ಮಾಡಿ- ಕಾರ್ಯಕರ್ತರಿಗೆ ಕರೆ….
ಗ್ರಾ.ಪಂ ಚುನಾವಣೆ ಬಗ್ಗೆ ಕಾರ್ಯಕರ್ತರಿಗೆ ಕರೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸೋಲಿಸಬೇಕು ಅನ್ನೊದಾದ್ರೆ ಒಬ್ಬಬ್ಬರು ಮಾತ್ರ ಚುನಾವಣೆಗೆ ನಿಲ್ಲಿ. ನೀವೆ ಮೂರು ಮೂರು ಜನ ಚುನಾವಣೆಗೆ ನಿಲ್ಲಬೇಡಿ. ನಮ್ಮ ಕಾರ್ಯಕರ್ತರು ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಸೂಚಿಸಿದರು.
ಚಾಮುಂಡೇಶ್ವರಿ ಪರ್ಯಾಯ ಲೀಡರ್ ಬಗ್ಗೆ ಚಿಂತೆ ಬಿಡಿ. ಚಾಮುಂಡೇಶ್ವರಿಯಲ್ಲಿ ಎಂ ಎಲ್ ಎ ಆಗಲಿಕ್ಕೆ ಸಾಕಷ್ಟು ಜನರಿಗೆ ಆರ್ಹತೆ ಇದೆ. ಬಿಜೆಪಿಯವರು ಚುನಾವಣೆಗೆ ಹಣವನ್ನ ಅವರ ಅಪ್ಪನ ಮನೆಯಿಂದ ತರ್ತಾರ ಯಾರಾದ್ದೊ ತಲೆ ಹೊಡೆದು ದುಡ್ಡು ತರ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಒಂದು ಕಾಲದಲ್ಲಿ ಬಿಜೆಪಿಯವರು ಬಿ ಫಾರಂ ಹಿಡಿದುಕೊಂಡು ತಾಲ್ಲೂಕು ಕಛೇರಿ ಬಳಿ ಕ್ಯಾಂಡಿಡೇಟ್ ಇಲ್ಲದೆ ಬಂದವರಿಗೆ ಟಿಕೆಟ್ ಕೊಡ್ತಾ ಇದ್ರು. ಅವರಿಗೆ ಈಗಲೂ ಹಲವು ಕಡೆ ಸ್ಪರ್ಧಿಗಳಿಲ್ಲ. ಈ ಬಾರಿ ಎಲ್ಲ ಪಂಚಾಯತಿಗಳನ್ನು ಗೆದ್ದು ಬರಬೇಕು. ನಾಳೆಯಿಂದಲೇ ಎಲ್ಲರೂ ಕ್ಯಾಂಪೇನ್ ಆರಂಭ ಮಾಡಿ ಎಂದು ಕರೆ ನೀಡಿದರು.
english summary…
It is because of me H.D.Kumaraswamy became Chief Minister: Siddarmaiah
Mysuru, Dec. 18, 2020 (www.justkannada.in): Former Chief Minister and Opposition leader Siddaramaiah today said that if he could have wished to pull down the coalition government, he wouldn’t have allowed H.D. Kumaraswamy to become the Chief Minister.
“Responding to former CM H.D.Kumaraswamy’s allegation Siddaramaiah was the reason for the collapse of the coalition government, Siddaramaiah said, “If I would have been adamant in not making Kumaraswamy the Chief Minister during the Cong-JDS coalition, would he become the Chief Minister? He lost his power by sitting at Hotel Taj West End, from where he used to rule the state,” he alleged.
Speaking at the Grama Janadhikara conference held at the Chamundeshwari Assembly Constituency, he said if Kumaraswamy would have responded positively to the MLAs, no one would have migrated to BJP. He alleged that HDK lacks political maturity.
Keywords: Siddaramaiah/ H.D.Kumaraswamy/ coalition government
Key words: mysore – former cm-Siddaramaiah -Tong-hd kumaraswamy- CM –BS yeddyurappa