ಮೈಸೂರು,ಸೆಪ್ಟಂಬರ್,14,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಡುವೆ ಈ ಬಾರಿಯೂ ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಯಾವುದೇ ವಿರೋಧ ಮಾಡದೇ ಅನುಮತಿ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಮಾಡುತ್ತೇವೆ. ಈ ಸಂಬಂಧ ಪೂರ್ವಭಾವಿ ಸಭೆ ಕೂಡ ಮಾಡಲಾಗಿದೆ. ಕೊರೋನಾ ಇರುವ ಕಾರಣಕ್ಕೆ ಸರಳವಾಗಿ ಮಹಿಷಾ ದಸರಾ ಆಚರಿಸುತ್ತೇವೆ. ಇದಕ್ಕೆ ಮೈಸೂರು ಪೋಲಿಸ್ ಇಲಾಖೆ ಅನುಮತಿ ನೀಡಬೇಕು. ಅನುಮತಿ ಕೊಟ್ಟರು ಮಾಡುತ್ತೇವೆ. ಕೊಡದೇ ಇದ್ದರೂ ಮಾಡುತ್ತೇವೆ ಎಂದಿದ್ದಾರೆ.
ನಾವು ಯಾವುದೇ ಧರ್ಮದ ವಿರುದ್ಧ ಆಚರಣೆ ಮಾಡುತ್ತಿಲ್ಲ. ನಮ್ಮ ಆಚರಣೆಯಿಂದ ಬೇರೆಯವರಿಗೂ ತೊಂದರೆ ಆಗಲ್ಲ. ಹಾಗಾಗಿ ಮಹಿಷಿ ದಸರಾ ಆಚರಣೆಗೆ ಅನುಮತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದ್ದಾರೆ.
Key words: Mysore- Former mayor -demands -permission – Mahisha Dasara -celebration