ಮೈಸೂರು,ನ,7,2019(www.justkannada.in): ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಮಾಜಿ ಸಚಿವ ಡಿ,ಕೆ ಶಿವಕುಮಾರ್ ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ಬೆಂಗಳೂರಿನಿಂದ ಶತಾಬ್ದಿ ರೈಲಿನಲ್ಲಿ ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಹೂವಿನ ಹಾರ ಹಾಕಿ ತಮಟೆ ನಗಾರಿ ಮೂಲಕ ಸ್ವಾಗತ ಕೋರಿದರು. ಈ ವೇಳೆ ಮಾಜಿ ಸಂಸದ ಆರ್ ಧ್ರುವನಾರಯಣ್, ಶಾಸಕ ಅನೀಲ್ ಚಿಕ್ಕಮಾದು, ಶಾಸಕ ತನ್ವೀರ್ ಸೇಠ್ ಉಪಸ್ಥಿತರಿದ್ದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ತೆರೆದ ವಾಹನದಲ್ಲಿ ರೈಲ್ವೆ ನಿಲ್ದಾಣದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ ಕರೆದೊಯ್ಯಲಾಯಿತು. ಸಾವಿರಾರು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಸಾಗಿದರು.
ಬಹಿರಂಗ ಸಭೆಯ ವೇದಿಕೆಗೆ ಆಗಮಿಸಿದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಹೂಗುಚ್ಚ ನೀಡಲು ಕಾರ್ಯಕರ್ತರು, ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆಯಿತು.
ಕಾರ್ಯಕರ್ತರನ್ನು ಸಮಾದಾನಪಡಿಸಲು ಮುಂದಾದ ಡಿಕೆಶಿ. ಸಂಜೆ ,೮ ಗಂಟೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿಯಾಗಿ. ನಾನು ಇಂದು ಮೈಸೂರಿಲ್ಲೆ ಇರುತ್ತೇನೆ. ಹಲವು ಕಾರ್ಯಕ್ರಮ ಇದೆ. ಇತರೆ ಪಕ್ಷದವರೂ ಕೂಡ ನನ್ನನ ಬೇಟಿ ಮಾಡಲು ಬಂದಿದ್ದಾರೆ. ಕೆಲವರು ಕರೆ ಸಹ ಮಾಡಿದ್ದಾರೆ. ಯಾರು ಸಹ ಗೊಂದಲಕ್ಕೆ ಒಳಗಾಗಬೇಡಿ ಎಲ್ಲರನ್ನ ಭೇಟಿ ಮಾಡ್ತೇನೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಸಿಎಂ ಆಗಬೇಕು- ತನ್ವೀರ್ ಸೇಠ್ ಇಂಗಿತ…
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್ , ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಡಿಕೆ ಶಿವಕುಮಾರ್ ಮುಖ್ಯ ಮಂತ್ರಿಯಾಗಬೇಕು. ಡಿಕೆ ಶಿವಕುಮಾರ್ ಅಜಾತಶತ್ರು. ಆದರೂ ದುರ್ದೈವ ಎಲ್ಲಾ ಕಷ್ಟ ಅವರಿಗೆ ಬರುತ್ತೇ. ಕಾಂಗ್ರೆಸ್ ಪಕ್ಷ ಸದಾ ನಿಮ್ಮ ಜೊತೆಗಿರುತ್ತದೆ. ಅದು ಯಾವುದೇ ಸಂದರ್ಭ ಇರಲಿ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷದ ನಾಯಕರ ಮೇಳೆ ಅಧಿಕಾರಿಗಳನ್ನ ಛೂ ಬಿಡ್ತಾ ಇದ್ದಾರೆ. ಸುಳ್ಳು ಆರೋಪದ ಅಡಿ ಕೇಸು ದಾಖಲಿಸುತ್ತಿದ್ದಾರೆ. ಕಾಂಗ್ರೆಸ್ ಅನ್ನ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ಭಯ ಬಿಜೆಪಿಯವ್ರಿಗೆ ಕಾಡುತ್ತಿದೆ. ಡಿಕೆಶಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಪತ್ಭಾಂದವ ಡಿಕೆ ಶಿವಕುಮಾರ್ – ಧ್ರುವನಾರಯಣ್.
ಇದೇ ಸಮಯದಲ್ಲಿ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್, ಕಾಂಗ್ರೆಸ್ ಪಕ್ಷದ ಅಪತ್ಭಾಂದವ ಡಿಕೆ ಶಿವಕುಮಾರ್. ನಾನು ಸಂಕಷ್ಟದಲ್ಲಿ ಇದ್ದಂತ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಳಿಸಿ ಸಂತೆಮರಹಳ್ಳಿಗೆ ಬಿ ಪಾರಂ ಕೊಟ್ಟು ಕಳುಹಿಸಿದವರು ಡಿಕೆಶಿ. ಮೊದಲೇ ಅಲ್ಲಿ ಕೆಲಸ ಮಾಡು ಅಂತ ಸೂಚನೆ ನೀಡಿದ್ದ್ರು. ಕ್ಷೇತ್ರಕ್ಕೆ ಬಂದು ನನ್ನ ಪರ ಪ್ರಚಾರ ಮಾಡುದ್ರು. ರಾಜಕೀಯವಾಗಿ ಮನೆಗೆ ಬೇಸ್ ಹಾಕಿಕೊಟ್ಟವ್ರು ಡಿಕೆಶಿ. ಡಿಕೆಶಿ ರಾಜ್ಯಕ್ಕೆ ಅಲ್ಲ ರಾಷ್ಟ್ರಕ್ಕೆ ಬೇಕಾದವರು. ಅವ್ರು ಕಷ್ಟದಲ್ಲಿದ್ದಾಗ ಅವರಿರೊ ಸ್ಥಳಕ್ಕೆ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂದಿ ಹಾಗೂ ರಾಹುಲ್ ಗಾಂಧಿ ಬೇಟಿ ನೀಡಿ ಬೆಂಬಲ ನೀಡಿದ್ರು. ಇದ್ರಲ್ಲೆ ಗೊತ್ತಾಗುತ್ತೆ ಡಿಕೆಶಿ ಎಷ್ಟು ಮುಖ್ಯ ಅಂತ ಎಂದು ಡಿಕೆಶಿ ಸಹಾಯವನ್ನ ನೆನಪಿಸಿಕೊಂಡರು.
ನೂರಾರು ಜನರಿಗೆ ಅವ್ರು ಸಹಾಯ ಮಾಡಿದ್ದಾರೆ. ಅವರಿಗೆ ಆತ್ಮ ಸ್ಥೈರ್ಯ ನೀಡುವಂತ ಸಮಾರಂಭ ಇದು. ನಾವೆಲ್ಲರೂ ಅವ್ರ ಜೊತೆಗಿರ್ತೇವೆ. ನಾವು ರಾಮ ಲಕ್ಷ್ಮಣ ನೋಡಿಲ್ಲ. ನಿಜವಾದ ರಾಮಲಕ್ಷ್ಮಣರು ಡಿಕೆಶಿ ಹಾಗು ಡಿಕೆ ಸುರೇಶ್ ಎಂದು ಧೃವನಾರಾಯಣ್ ತಿಳಿಸಿದರು.
Key words: Mysore- former Minister- DK Sivakumar Welcome- Tanveer Seth – CM.