ಮೈಸೂರು,ಜೂ,27,2020(www.justkannada.in): ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಮಂತ್ರಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ನನ್ನನ್ನು ಮಂತ್ರಿ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಮಂತ್ರಿ ಸ್ಥಾನ ಕೊಡಿ ಎಂದು ಕೇಳುವುದೂ ಇಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಾಸಕನಾಗಿದ್ದುಕೊಂಡೇ ಪಕ್ಷ ನೀಡುವ ಕೆಲಸವನ್ನು ಮಾಡುತ್ತೇನೆ ಎಂದರು.
ಟೆಂಡರ್ ಕರೆದರೆ ಮೈಶುಗರ್ ಕಾರ್ಖಾನೆ ನಡೆಸುತ್ತೇನೆ. ಪಿಎಸ್ಎಸ್ಕೆ ಕಾರ್ಖಾನೆ 40 ವರ್ಷಕ್ಕೆ ಗುತ್ತಿಗೆ ಪಡೆದಿದ್ದೇನೆ. ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ 24 ಗಂಟೆಯಲ್ಲಿ ಕಾರ್ಮಿಕರಿಗೆ ಬಾಕಿ ವೇತನ ನೀಡುತ್ತೇನೆ. ಆಗಸ್ಟ್ 1 ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ಪಿಎಸ್ಎಸ್ ಕೆ ಕಾರ್ಖಾನೆ ನಡೆಸುವ ಬಗ್ಗೆ ಸ್ಥಳೀಯ ಶಾಸಕರ ಹಾಗೂ ರೈತರ ವಿಶ್ವಾಸ ಪಡೆಯುತ್ತೇನೆ. ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ೨೦ ವರ್ಷಗಳಿಂದಲೂ ಸ್ನೇಹಿತರು ಎಂದು ಮುರುಗೇಶ್ ನಿರಾಣಿ ತಿಳಿಸಿದರು.
ಪಿಎಸ್ಎಸ್ ಕೆ ವಿಷಯದಲ್ಲಿ ಜಾತಿ, ರಾಜಕೀಯ ಇಲ್ಲ. ನನ್ನ ಯಾವುದೇ ಉದ್ಯಮಕ್ಕೂ ರಾಜಕೀಯಕ್ಕೂ ಸಂಬಂಧವಿರಲ್ಲ. ಪಿಎಸ್ಎಸ್ ಕೆ ಯಲ್ಲಿ ಇಥನಾಲ್ ಉಪ ಉತ್ಪನ್ನ ತಯಾರಿಸಲು ಆದ್ಯತೆ ನೀಡಲಾಗುತ್ತದೆ. ಸಹಕಾರ, ಸರ್ಕಾರಿ ಸಕ್ಕರೆ ಕಾರ್ಖಾನೆಗಳ ನಷ್ಟಕ್ಕೆ ಇಚ್ಛಾಶಕ್ತಿ ಕೊರತೆಯೇ ಕಾರಣ. ಐಎಎಸ್ ಅಧಿಕಾರಿಗಳ ವರ್ಗಾವಣೆ, ಉಪ ಉತ್ಪನ್ನಗಳಿಲ್ಲದಿರುವುದು ನಷ್ಟಕ್ಕೆ ಕಾರಣ ಎಂದು ಮುರುಗೇಶ್ ನಿರಾಣಿ ತಿಳಿಸಿದರು.
Key words: mysore-Former minister- Murugesh Nirani – tender – Mysugar factory