ಮೈಸೂರು,ಜು,10,2020(www.justkannada.in): ಪ್ರಧಾನಿ ಮೋದಿ ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಗೆ ಮಾಜಿ ಸಂಸದ ಧೃವನಾರಾಯಣ್ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾತನಾಡಿದ ಧೃವನಾರಾಯಣ್, ಈ ಹಿಂದೆ ಹಿಂದುಳಿದ ವರ್ಗಗಳಿಗಾಗಿ ಮಂಡಲಆಯೋಗ ರಚನೆ ಮಾಡಿದಾಗ ಎಬಿವಿಪಿ ದೇಶವ್ಯಾಪಿ ಹೋರಾಟ ಮಾಡಿದ್ರು. ವಿಪಿ ಸಿಂಗ್ ಗೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆದಿದ್ರಿ ಆಗ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರ್ಲಿಲ್ವಾ. ಆಗ ನಿಮ್ಮ ಮೋದಿ ಎಲ್ಲೊಗಿದ್ರು..? ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ಪ್ರಶ್ನೆ ಹಾಕಿದ್ದಾರೆ
ಸಿದ್ದರಾಮಯ್ಯ ಅವರನ್ನ ಟೀಕೆ ಮಾಡ್ತೀರಿ ಒಂದು ಕಡೆ ಒಳ್ಳೆ ಆಡಳಿತಗಾರ ಅಂತೀರಾ.? ಅನ್ನ ಭಾಗ್ಯ ತಂದಿದ್ದು ನಾನೇ ಅಂತೀರಿ ನಿಮ್ಮಲ್ಲೇ ದ್ವಂದ್ವವಿದೆ. ಬಿಜೆಪಿಯಲ್ಲಿ ನಿಮಗೆ ಗೊಂದಲ ಹೆಚ್ಚಾಗಿರಬೇಕು ಎಂದು ಹೆಚ್.ವಿಶ್ವನಾಥ್ ವಿರುದ್ದ ಧೃವನಾರಾಯಣ್ ವ್ಯಂಗ್ಯವಾಡಿದರು.
ಮಹಾರಾಷ್ಟ್ರದ ಫಡ್ನವಿಸ್ ತರ ಸಿದ್ದರಾಮಯ್ಯ ವಿಪಕ್ಷರಾಗಿ ಕೆಲಸ ಮಾಡುತ್ತಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಧೃವನಾರಾಯಣ್, ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರು ಎಂದಿಗೂ ವಿಫಲರಾಗಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಂಕಷ್ಟದ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರಿಗೆ ಮತ್ತು ಆಟೊ ಚಾಲಕರಿಗೆ ನೆರವಾಗುವಂತೆ ಮೊದಲು ಸಲಹೆ ಕೊಟ್ಟಿದ್ದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್. ಸಿದ್ದರಾಮಯ್ಯ ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡಿದ್ದಾರೆ ಎಂದು ಧೃವನಾರಾಯಣ್ ಹೊಗಳಿದರು.
Key words: mysore- former MP- Dhruvanarayan-H.Vishwanath-pm modi- leader