ಮೈಸೂರು,ನವೆಂಬರ್, 26,2020(www.justkannada.in): ಮೈಸೂರು ಡಿಸಿ ಮತ್ತಿ ಎಂಎಲ್ ಎ ನಡುವೆ ಜಟಾಪಟಿ ಬೆನ್ನಲ್ಲೇ ಇದೀಗ ಹಾಲಿ ಮಾಜಿ ಸಂಸದರ ವಾಕ್ಸಮರ ತಾರಕಕ್ಕೇರಿದ್ದು, ನಿನ್ನೆಯಷ್ಟೆ ಮಾತನಾಡಿ ಧ್ರುವನಾರಾಯಣ್ ನನ್ನ ಉಗುರಿಗೂ ಸಮನಿಲ್ಲ ಎಂದು ಹೇಳಿಕೆ ನೀಡಿದ್ದ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಮಾಜಿ ಸಂಸದ ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಮೊದಲಿಂದಲೂ ಇನ್ನೊಬ್ಬರನ್ನ ನಿಂದಿಸಿ ಅದರಲ್ಲಿ ಸುಖ ಕಾಣಲು ಬಯಸುವವರು. ಇನ್ನೊಬ್ಬರನ್ನ ನಿಂದಿಸೋದ್ರಲ್ಲೇ ಅವರು ಸುಖ ಕಾಣ್ತಾರೆ. ಇದು ಶ್ರೀನಿವಾಸ್ ಪ್ರಸಾದ್ ವ್ಯಕ್ತಿತ್ವವನ್ನ ತೋರಿಸುತ್ತೆ ಎಂದು ಮಾಜಿ ಸಂಸದ ಧೃವನಾರಾಯಣ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಆರ್.ಧೃವನಾರಾಯಣ್, ಆ ಪದ ಬಳಕೆಯಿಂದ ಅವರ ವ್ಯಕ್ತಿ ಏನು ಅಂತ ತೋರ್ಪಡಿಸಿದ್ದಾರೆ. ಹಿರಿಯ ರಾಜಕಾರಣಿ, ಲಾಮೇಕರ್ ಆದವರು. ಕಾನೂನನ್ನ ರಚನೆ ಮಾಡುವವರು ತಮ್ಮ ನಡೆನುಡಿಯಲ್ಲಿ ಇತರರಿಗೆ ಮಾದರಿ ಆಗಬೇಕು. ಪಾಳೆಗಾರಿಕೆ ಸಂಸ್ಕ್ರತಿಯ ಫ್ಯೂಡಲ್ ಮೈಂಡ್ನವರಂತೆ ಮಾತನಾಡಿದ್ರೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಆಗಲ್ಲ. ಇದರಿಂದ ಅವರ ಸಂಸ್ಕ್ರತಿ ಏನು ಎಂಬುದನ್ನ ತೋರಿಸುತ್ತದೆ ಎಂದು ಟಾಂಗ್ ನೀಡಿದರು.
ನಿನ್ನೆ ಸಿಎಂ ಭೇಟಿಯಾದಾಗ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ ಕೇಳುವ ಬದಲು ತಮ್ಮ ಅನುಯಾಯಿಗಳಿಗೆ ಬೋರ್ಡ್ ಛೇರ್ಮನ್ ಕೇಳಲು ಹೋಗಿದ್ದಾರೆ. ಈ ರೀತಿ ಇನ್ನೊಬ್ಬರ ತುಚ್ಚವಾಗಿ ಕಾಣುವುದು ಅವರ ಗುಣ. ಇನ್ನಾದರೂ ತಮ್ಮ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳಿ ಎಂದು ಮಾಜಿ ಸಂಸದ ಧೃವನಾರಾಯಣ್ ಸಲಹೆ ನೀಡಿದರು.
Key words: mysore-former MP-R.dhruvanarayan-chamarajanagar MP-Srinivas Prasad