ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಕೇಸನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ.ಆ ಪ್ರದೇಶ ನಿರ್ಜನ ಪ್ರದೇಶ ಅಲ್ಲ. ಅಂತಹ ಪ್ರದೇಶದಲ್ಲಿ ಪೊಲೀಸ್ ಗಸ್ತು ಹಾಕಿಲ್ಲ ಏಕೆ.? ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಕುರಿತು ಕೆಪಿಸಿಸಿ ಸತ್ಯಶೋಧನ ಸಮಿತಿಯ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪಾರಂಪರಿಕ ನಗರ ಮೈಸೂರಿನಲ್ಲಿ ಈ ನಡೆದಿರುವುದು ಹೀನ ಕೃತ್ಯ. ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವಂತಹ ಜವಾಬ್ಧಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ್ದಾಗಿರುತ್ತೆ. ಯಾವ ದೇಶದಲ್ಲಿ ರಾಮನ ಜಪ ಮಾಡುತ್ತಿದ್ದಾರೆ, ರಾಮನ ಆದರ್ಶಗಳ ಇಡಿ ದೇಶಕ್ಕೆ ನೀಡ್ತಿನಿ ಅಂತ ಹೇಳುತ್ತಾರೆ. ಆದ್ರೆ ರಾವಣನ ರಾಜ್ಯದ ನೀತಿಯನ್ನು ಮೈಸೂರಿನಲ್ಲಿ ಕಂಡಿದ್ದಿನಿ. ನಿರ್ಭಯ ಹಾಗೂ ತೆಲಂಗಾಣ ಕೇಸ್ ಗಿಂತಲೂ ಹೀನ ಕೃತ್ಯ ಮೈಸೂರಿನಲ್ಲಿ ನಡೆದಿದೆ. ಗೃಹ ಸಚಿವರು ತಮ್ಮ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಾಗ ಅವರು ಏನ್ ಹೇಳಿದ್ರು ಅನ್ನೋದನ್ನ ಅವರು ನೆನಪು ಮಾಡಿಕೊಳ್ಳಬೇಕು. ಅಧಿಕಾರಕ್ಕೆ ಬಂದ ಮೇಲೆ ಅವರು ಕೆಲಸವನ್ನ ಅವರು ಮರೆತಿದ್ದಾರೆ. ಬಿಜೆಪಿ ಮೈಂಡ್ ಸೆಟ್ ರಾಜ್ಯ ಹಾಗೂ ದೇಶದಲ್ಲಿ ಪ್ರಭಾವ ಬೀರುತ್ತಿದೆ. ರಾಜ್ಯದ ಮಾಜಿ ಸಚಿವರ ಮೇಲೆ ಅತ್ಯಾಚಾರ ಕೇಸ್ ಇದೆ. ಆದ್ರೂ ಅವರ ರಕ್ಷಣೆ ಆಗುತ್ತಿದೆ ಎಂದು ಕಿಡಿಕಾರಿದರು.
ಇದು ಎಲ್ಲೋ ಕಾಡಿನಲ್ಲಿ ನಡೆದ ಘಟನೆ ಅಲ್ಲ. ಇಲ್ಲಿ ಪೆಟ್ರೋಲಿಂಗ್ ಮಾಡದೆ ಇರೋದು ಮೊದಲ ಫೇಲ್ಯುರ್. ನಮ್ಮ ಸರ್ಕಾರಗಳು ಇಂತಹ ಘಟನೆಗಳಲ್ಲಿ ಸೂಕ್ತ ಶಿಕ್ಷೆ ಕೊಡಿಸದೆ ಇರೋದು ಎರಡನೇ ತಪ್ಪು. ಇಬ್ಬರು ಹುಡುಗರು 9.15 ಆಸ್ಪತ್ರೆಗೆ ಹೋಗ್ತಾರೆ. ಆಸ್ಪತ್ರೆ ಸಿಬ್ಬಂದಿ ಸಂಬಂಧ ಪಟ್ಟ ಪೊಲೀಸರಿಗೆ ಮಾಹಿತಿ ನೀಡ್ತಾರೆ. ಆದ್ರೆ ಆ ಹೆಣ್ಣು ಮಗುವಿನ ಅಡ್ಮಿಷನ್ ಮಾಡಿಕೊಳ್ಳುವುದು 10:50 ನಿಮಿಷಕ್ಕೆ. 11:35 ಕ್ಕೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಾರೆ. ಪೊಲೀಸರು ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಬೇಕಿತ್ತು. ಆದ್ರೆ ಪೊಲೀಸರು ಬುಧವಾರ ಮಧ್ಯಾಹ್ನ ಎಫ್ ಐಆರ್ ದಾಖಲು ಮಾಡ್ತಾರೆ. ಇದು ಇಲಾಖೆಯ ನಿರ್ಲಕ್ಷ್ಯ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪಿಸಿದರು.
Key words: mysore-gang rape- case – becoming -misguided – Congress leader- VS Ugrappa