ಮೈಸೂರು,ಮಾರ್ಚ್,16,2024(www.justkannada.in): ಅತ್ಯಂತ ಕಿರಿಯ ವಯಸ್ಸಿನ ವುಶು ರಾಷ್ಟ್ರೀಯ ಪದಕ ವಿಜೇತೆಯಾಗಿ, ಮೈಸೂರಿನ ಉದಯೋನ್ಮುಖ ಕ್ರೀಡಾ ತಾರೆ ಪ್ರಣತಿ.ಜಿ, ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪ್ರವೇಶಿಸುವ ಮೂಲಕ ವುಶು ಮಾರ್ಷಲ್ ಆರ್ಟ್ಸ್ನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾಳೆ.
ಕಳೆದ ಒಂದುವರೆ ವರ್ಷಗಳಿಂದ ಈ ಆಯ್ಕೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿತ್ತು. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನ ಭಾರತೀಯ ಸಮಾನವಾದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ (LBR), ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ನಿಜವಾದ ಅತ್ಯುತ್ತಮ ಸಾಧನೆಗಳನ್ನು ಗುರುತಿಸುತ್ತದೆ.
ಈ ಮೊದಲು ಪ್ರಣತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾಸ್ ವರ್ಡ್ ರೆಕಾರ್ಡ್ಸ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ಸ್ಥಾನ ಪಡೆದಿದ್ದಾಳೆ. ಪದಕ ವಿಜೇತರಲ್ಲಿ ಯಾರೂ 11 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಲ್ಲದ ಕಾರಣ ಪ್ರಣತಿಯನ್ನು ಭಾರತದ ಅತ್ಯಂತ ಕಿರಿಯ ವಯಸ್ಸಿನ ಪದಕ ವಿಜೇತೆ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಪದಕವನ್ನು ಪಡೆದಾಗ ಪ್ರಣತಿಗೆ ಕೇವಲ 7 ವರ್ಷ, 2022ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ವುಶು ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ತನಗಿಂತ ಹಿರಿಯ ಕ್ರೀಡಾಪಟುಗಳ ಜೊತೆ ಸ್ಪರ್ಧಿಸಿ ಕಂಚಿನ ಪದಕವನ್ನು ಗೆದ್ದು ಈ ಸಾಧನೆಯನ್ನು ಮಾಡಿದ್ದಾಳೆ.
Key words: Mysore – girl – ‘Limca Book of Records-created -history.