ಮೈಸೂರು,ಮಾ,16,2020(www.justkannada.in): ಮಹಾಮಾರಿ ಕೊರೋನಾಗೆ ಲಸಿಕೆ ಕಂಡುಹಿಂಡಿಯುವ ಸಂಶೋಧನಾ ತಂಡದಲ್ಲಿ ಕನ್ನಡಿಗ ಮೈಸೂರು ವಿವಿಯ ಹಳೆ ವಿದ್ಯಾರ್ಥಿ ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ಇದಕ್ಕೆ ಅವರ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಲ್ಜಿಯಂ ದೇಶದಲ್ಲಿ ನಡೆಯುತ್ತಿರುವ ಸಂಶೋಧನಾ ತಂಡದಲ್ಲಿ ವಿಜ್ಞಾನಿ ಮಹದೇಶ್ ಪ್ರಸಾದ್ ಅವರಿದ್ದಾರೆ. ಮಾದೇಶ್ ಪ್ರಸಾದ್ ಮೂಲತಃ ಹಾಸನ ಜಿಲ್ಲೆಯ ಅರಕಲುಗೂಡಿನವರು. ತಮ್ಮ ಮಗ ಮಹಾಮಾರಿ ಕೊರೋನಾಗೆ ಲಸಿಕೆ ಕಂಡುಹಿಡಿಯುವ ತಂಡದಲ್ಲಿರುವುದಕ್ಕೆ ತಾಯಿ ರತ್ನಮ್ಮ ಹರ್ಷ ವ್ಯಕ್ತಪಡಿದ್ದಾರೆ.
ನಮ್ಮ ಮಗ ಕೊರೋನಾ ವೈರಸ್ ವಿರುದ್ಧದ ಲಸಿಕೆ ಸಂಶೋಧನಾ ತಂಡದಲ್ಲಿರೋದು ತುಂಬಾ ಖುಷಿ ಆಗುತ್ತಿದೆ. ನನ್ನ ಮೂರು ಮಕ್ಕಳೂ ಸರ್ಕಾರಿ ಶಾಲೆಯಲ್ಲಿ ಓದಿದವರು. ಪದವಿವರೆಗೆ ಹಾಸನದ ಅರಕಲಗೂರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಎಂಎಸ್ಸಿ ಹಾಗೂ ಪಿಎಚ್ಡಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿದ್ದಾರೆ. ವಿದೇಶಕ್ಕೆ ಹೋಗಿ 8 ವರ್ಷಗಳು ಕಳೆದಿದೆ. ಮೊದಲು ಜರ್ಮನಿ, ಅಮೆರಿಕಾ, ಸ್ವೀಡನ್ ಈಗ ಬೆಲ್ಜಿಯಂ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಾಯಿ ರತ್ನಮ್ಮ ತಿಳಿಸಿದರು.
ಎರಡು ತಿಂಗಳ ಹಿಂದೆಯೇ ಲಸಿಕೆ ಸಂಶೋಧನಾ ತಂಡದಲ್ಲಿ ಇರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ನಿತ್ಯ ಎರಡು ಬಾರಿ ಫೋನ್ ಮಾಡುತ್ತಿದ್ದ. ಇತ್ತೀಚೆಗೆ ತುಂಬಾ ಬ್ಯುಸಿ ಇದ್ದೇನೆ ಎಂದು ಹೇಳುತ್ತಿದ್ದ. ನನಗಂತೂ ತುಂಬಾ ಖುಷಿ ಆಗುತ್ತಿದೆ. ಚಿಕ್ಕಂದಿನಿಂದಲೂ ನನ್ನ ಮಗ ಸಂಶೋಧನೆಯಲ್ಲಿ ತುಂಬಾ ಆಸಕ್ತಿ ಇಟ್ಟುಕೊಂಡಿದ್ದ. ನನ್ನ ಆಸೆಯಂತೆ ಆತ ವಿಜ್ಞಾನಿಯಾಗಿರೋದು ಸಂತಸ ಹೆಚ್ಚು ಮಾಡಿದೆ. ಲಸಿಕೆ ಕಂಡುಹಿಡಿಯುವ ವಿಶ್ವಾಸ ಇದೆ. ಬಹಳ ಬೇಗ ಕರೊನಾ ಲಸಿಕೆ ಜನರಿಗೆ ತಲುಪುವಂತಾಗಲಿ ಎಂದು ಮಹದೇಶ್ ಪ್ರಸಾದ್ ತಾಯಿ ರತ್ನಮ್ಮ ಹಾಗೂ ಸಹೋದರ ಹರೀಶ್ ಕುಮಾರ್ ಎಂದು ನುಡಿದರು.
Key words: mysore- Government school -Kannada Medium- student –corona virus- Research