ಮೈಸೂರು,ಆಗಸ್ಟ್,30,2023(www.justkannada.in): ಇಡೀ ದೇಶ ಸದೃಢವಾಗಲು ಮಹಿಳೆಯರು ಕಾರಣ. ಮಹಿಳೆಯರಿಲ್ಲದೇ ದೇಶ ಸದೃಢವಾಗಲು ಸಾಧ್ಯವಿಲ್ಲ. ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿಯಾಗಿದ್ದು, ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಈಡೇರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಿಸಿತ್ತು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾನ ಆಗಿದೆ. ಪ್ರತಿ ತಿಂಗಳು 2 ಸಾವಿರ ಹಣ ಜಮೆ ಆಗಲಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ. ನಾವು ಹೇಳಿದಂತೆ ರಾಜ್ಯದ ಹೆಣ್ಣು ಮಕ್ಕಳು ಉಚಿತವಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರೀಗ ಉಚಿತವಾಗಿ ಸಂಚರಿಸುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಗೃಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ ನೀಡಲಾಗುತ್ತಿದೆ. ಪ್ರತಿಯೊಂದು ಮನೆಗೂ 200 ಯೂನಿಟ್ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ಒಂದು ಯೋಜನೆ ಬಿಟ್ಟು ಉಳಿದ ಯೋಜನೆಗಳು ಮಹಿಳೆಯರ ಸ್ವಾವಲಂಬನೆಗಾಗಿ ಮಾಡಿರುವ ಯೋಜನೆಗಳು. ಯುವನಿಧಿ ಯೋಜನೆ ಬಿಟ್ಟು, ಇನ್ನುಳಿದವು ಮಹಿಳೆಯರ ಕೇಂದ್ರಿತ ಯೋಜನೆಗಳು ಎಂದು ಹೇಳಿದರು.
ಅತ್ಯಂತ ದೊಡ್ಡ ಮರ ಇದ್ದರೂ ಸದೃಢ ಬೇರು ಇಲ್ಲದಿದ್ದರೆ ಮರ ನಿಲ್ಲೊದಿಲ್ಲ. ಇವತ್ತು ವಿಶಾಲ ಕಟ್ಟಡ ಸ್ಥಾಪನೆ ಮಾಡಲು ಉತ್ತಮ ಪಾಯ ಅಗತ್ಯ. ಭಾರತ್ ಜೋಡೋ ಯಾತ್ರೆ ಮಾಡಿದ್ದ ಸಂದರ್ಭದಲ್ಲಿ ಸಹಸ್ರಾರು ಮಹಿಳೆಯರ ಜೊತೆ ಮಾತನಾಡಿದ್ದೇನೆ. ಕರ್ನಾಟಕ ಒಂದರಲ್ಲೇ 600 ಕಿ.ಮೀ.ಪಾದಯಾತ್ರೆ ಮಾಡಿದ್ದೇನೆ ಪಾದಯಾತ್ರೆ ವೇಳೆ ನಾನು ಬೆಲೆ ಏರಿಕೆಯಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದನ್ನು ನೋಡಿದ್ದೇನೆ. ಬೆಲೆ ಏರಿಕೆ ಹೊರೆ ಮಹಿಳೆಯರ ಮೇಲೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದಿದ್ದರು. ಕರ್ನಾಟಕ ರಾಜ್ಯದಲ್ಲಿ ಪ್ರತಿಯೋಂದು ಮನೆಯ ಅಡಿಪಾಯ, ಮರದ ಬೇರುಗಳು ಮಹಿಳೆಯರು. ಸಧೃಡವಾಗಿ ಮಹಿಳೆಯರು ಇದ್ದಾರೆ. ಕರ್ನಾಟಕದ ಶಕ್ತಿ ಅಂದ್ರೆ ಹೆಣ್ಣು ಮಕ್ಕಳು. ಹೀಗಾಗಿಯೇ ಐತಿಹಾಸಿಕ ಯೋಜನೆಯನ್ನ ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರ ನೂರು ದಿನ ಪೂರೈಸಿದೆ. ನಾವು ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಕ್ಷಾ ಬಂಧನ ದಿನ ನಾವು ನುಡಿದಂತೆ ನಿಮ್ಮ ಅಕೌಂಟ್ ಗೆ ಹಣ ಹಾಕಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಕರ್ನಾಟಕ ದೇಶಕ್ಕೆ ದಿಕ್ಸೂಚಿಯಾಗಿ ನಿಂತಿರುವ ರಾಜ್ಯ.
ಕರ್ನಾಟಕ ದೇಶಕ್ಕೆ ದಿಕ್ಸೂಚಿಯಾಗಿ ನಿಂತಿರುವ ರಾಜ್ಯ. ನಾವು ಐದು ಗ್ಯಾರಂಟಿ ಯೋಜನೆ ತಂದಾಗ ಕೇಂದ್ರ ಸರ್ಕಾರ ಟೀಕಿಸಿತ್ತು. ಪ್ರಧಾನ ಮಂತ್ರಿಗಳು ಖುದ್ದಾಗಿ ಹೇಳಿದ್ದರು. ಸತ್ಯಕ್ಕೆ ದೂರವಾದ ಮಾತಾಡುತ್ತಿದೆ ಎಂದಿದ್ದರು. ಇವತ್ತು ಕೋಟಿಗೂ ಹೆಚ್ಚು ಮಹಿಳೆಯರ ಅಕೌಂಟ್ ಗೆ ನೇರವಾಗಿ ಹಣ ಜಮೆವಾಗಿದೆ. ಕರ್ನಾಟಕದ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಕರ್ನಾಟಕದ ಯೋಜನೆ ದೇಶದಲ್ಲೇ ಅತ್ಯಂತ ದೊಡ್ಡ ಹಣ ಪಾವತಿ ಮಾಡುವ ಯೋಜನೆ ಇದು. ವಿಶ್ವದಲ್ಲೇ ಯಾವುದೇ ಸರ್ಕಾರ ಈ ಕೆಲಸ ಮಾಡಿಲ್ಲ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಸಂರಕ್ಷಣೆ ಮಾಡಲಿದೆ. ಮಕ್ಕಳ ವಿದ್ಯಾಭ್ಯಾಸ ಕೊಡಿಸಬಹುದು ಕರ್ನಾಟಕ ರಾಜ್ಯದ ತಾಯಂದಿರು ಇಲ್ಲಿದ್ದೀರಾ. ರಾಜ್ಯದ ಏಳಿಗೆಗೆ ನೀವೇ ಕಾರಣ. ದೇಶದ 75 ವರ್ಷದ ಅಭಿವೃದ್ಧಿ ಮಹಿಳೆಯರಿಂದಲೇ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಾಗಿರಲಿ ನೀವು ನೇರವಾಗಿ ಬಂದು ಕೇಳಿ. ನಾವು ಯಾವತ್ತೂ ಸುಳ್ಳು ಆಶ್ವಾಸನೆ ಕೊಡಲ್ಲ. ಸಾಧ್ಯವಾದ್ರೆ ಅದನ್ನ ಮಾಡಿಯೇ ತಿರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
Key words: mysore-griha lakshmi yojana-Congress leader -Rahul Gandhi.