ಮೈಸೂರು,ಡಿಸೆಂಬರ್,16,2020(www.justkannada.in): ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದ್ದಕ್ಕೆ ಎಂಎಲ್ ಸಿ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷವನ್ನ ಮಿಠಾಯಿ ಪಡೆಯುವ ಮಗುವಿಗೆ ಹೋಲಿಕೆ ಮಾಡಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಮಗು ಹೋಗುತ್ತೆ. ಜೆಡಿಎಸ್ ಮಗುವಿನಂತೆ. ಯಾರು ಮಿಠಾಯಿ ತೋರಿಸುತ್ತಾರೆ ಅವರ ಕಡೆಗೆ ಹೋಗುತ್ತದೆ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಲೇವಡಿ ಮಾಡಿದರು.
ಸಾರ್ವಭೌಮ ಸದನದ ಬಾಗಿಲನ್ನ ಬೂಟಿನ ಕಾಲಿನಲ್ಲಿ ಒದ್ದರು…
ಇನ್ನು ನಿನ್ನೆ ವಿಧಾನಪರಿಷತ್ ನಲ್ಲಾದ ಗಲಾಟೆ ಗದ್ಧಲ, ಉಪಸಭಾಪತಿಯನ್ನ ಎಳೆದಾಡಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನಿನ್ನೆ ಸಾರ್ವಭೌಮ ಸದನದ ಬಾಗಿಲನ್ನ ಬೂಟು ಕಾಲಿನಿಂದ ಒದ್ದರು. ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ. ನಿನ್ನೆ ಇಡೀ ಸದನವನ್ನ ವೇದನೆಯಿಂದ ನೋಡಿದೆ. ಭಾರತದ ಎಲ್ಲ ಸದನಗಳನ್ನ ನಮ್ಮ ವಿಧಾನ ಪರಿಷತ್ ಮೀರಿ ನಿಂತಿದೆ. ತನ್ನದೆ ಸಂಸ್ಕತಿಯನ್ನ ಇಡೀ ದೇಶದಲ್ಲಿ ಬಿಂಬಿಸಿದೆ. ಅಂತಹ ವಿಧಾನ ಪರಿಷತ್ ನ ವಿಶಿಷ್ಠ ಸ್ಥಾನವನ್ನ ನಾವೆಲ್ಲಾ ಸೇರಿ ಕಳೆದ್ದಿದ್ದೀವಿ. ಯಾರು ಜನತಂತ್ರ ವ್ಯವಸ್ಥೆಯ ಬಗ್ಗೆ ಭಾಷಣ ಮಾಡಿದ್ರು ಅವರೇ ನಿನ್ನೆ ಅದನ್ನ ಸದನದಲ್ಲಿ ಕೊಚ್ಚಿ ಕೊಚ್ಚಿ ಕೊಂದರು ಎಂದು ಬೇಸರ ವ್ಯಕ್ತಪಡಿಸಿದರು.
ಸದನವನ್ನ ನಾವು ದೇವಾಲಯ ಅಂದವು. ಅದಕ್ಕೆ ಪ್ರಧಾನಿ ಮೋದಿ ಲೋಕಸಭೆಗೆ ಹಣೆಯಿಟ್ಟು ನಮಸ್ಕಾರ ಮಾಡಿ ಹೋದ್ರು. ಅಂತಹ ಸಾರ್ವಭೌಮ ಸದನದ ಬಾಗಿಲನ್ನ ಬೂಟಿನ ಕಾಲಿನಲ್ಲಿ ಒದ್ದರು. ಭಾರತಾಂಬೆ ನಮ್ಮನ್ನ ಕ್ಷಮಿಸಲಿ. ಅಧಿಕಾರ ಕೊಟ್ಟ ಜನ ನಮ್ಮನ್ನ ಕ್ಷಮಿಸಲಿ. ನಿನ್ನೆಯ ಘಟಮೆ ಖಂಡನೀಯ ಎಂದು ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
Key words: mysore- H.Vishwanath-Condemnation – incident –JDS- compared -child .