ಮೈಸೂರು,ಅ,17,2019(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣದ ಹೈಡ್ರಾಮಾ ಬೆನ್ನಲ್ಲೆ ಮಾಜಿ ಸಚಿವ ಸಾ.ರಾ ಮಹೇಶ್ ರಾಜೀನಾಮೆ ಕುರಿತು ಹೆಚ್.ವಿಶ್ವನಾಥ್ ಟೀಕೆ ವ್ಯಕ್ತಪಡಿಸಿದ್ದಾರೆ.
ಸಾ.ರಾ ಮಹೇಶ್ ಹುಸಿ ರಾಜೀನಾಮೆ ನೀಡಿದ್ದಾರೆ. ಅದಕ್ಕೆ ದಿನೇಶ್ ಬೆಂಬಲ ನೀಡಿದ್ದಾರೆ. ಹಾಗಾದ್ರೆ ಸಾ.ರಾ ಮಹೇಶ್ ಜೆಡಿಎಸ್ ಬಿಟ್ಟು ಹಳೆಯ ಶೆಡ್ ಬಿಜೆಪಿಗೆ ಬರ್ತಾರಾ..? ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಇಬ್ಬರು ನಾಯಕರ ಆಣೆ ಪ್ರಮಾಣ ಠುಸ್ ಆಗಿದ್ದು, ಇಬ್ಬರು ನಾಯಕರು ಚಾಮುಂಡಿ ಬೆಟ್ಟದಿಂದ ತೆರಳಿದ್ದಾರೆ. ಇನ್ನು ಸಾ.ರಾ ಮಹೇಶ್ ವಿರುದ್ದ ವಾಕ್ಸಮರ ಮುಂದುವರೆಸಿದ ಹೆಚ್.ವಿಶ್ವನಾಥ್, ಸಾ.ರಾ ಮಹೇಶ್ ಸುಳ್ಳುಗಾರ.ಆತನಿಗೆ ಧೈರ್ಯ ಇಲ್ಲ. ನನ್ನನ್ನ ಕೊಂಡುಕೊಂಡವನನ್ನ ಕರೆದುಕೊಂಡು ಬರುತ್ತಾರೆಂದು ನಾನು ಚಾಮುಂಡಿ ಬೆಟ್ಟ ದೇಗುಲದ ಹೊರಗಡೆ ಕಾದು ಕುಳಿತಿದ್ದೆ. ಆದರೆ ಸಾ.ರಾ ಮಹೇಶ್ ದೇವಸ್ಥಾನದ ಒಳಗಡೆಗೆ ಹೋಗಿ ಹೊರಕ್ಕೆ ಬರಲೇ ಇಲ್ಲ. ನನ್ನ ಮುಖ ನೋಡಲು ಇಷ್ಟ ಇಲ್ಲ ಎಂದಿದ್ದಾರಂತೆ. ಆಗಾದ್ರೆ ಇಲ್ಲಿಗೆ ಯಾಕೆ ಬರಬೇಕಿತ್ತು. ಇಂದು ಸತ್ಯ ಗೆದ್ದಿದೆ. ಸುಳ್ಳು ಸೋತಿದೆ ಎಂದು ತಿಳಿಸಿದರು.
ಹಾಗೆಯೇ ಸಾ.ರಾ ಮಹೇಶ್ ಕಣ್ಣೀರು ಹಾಕಿದ್ದ ಬಗ್ಗೆ ವ್ಯಂಗ್ಯವಾಡಿದ ಹೆಚ್.ವಿಶ್ವನಾಥ್, ಜೆಡಿಎಸ್ ಅಂದ್ರೆ ಕಣ್ಣೀರು, ಸಾ.ರಾ ಮಹೇಶ್ ಅಂದ್ರೆ ಕಣ್ಣೀರು. ನಾಣು ಅವರ ತಂಟೆಗೆ ಹೋಗಲ್ಲ. ಅವರು ನನ್ನ ತಂಟೆಗೆ ಬರಬಾರದು. ಇದನ್ನ ಇಲ್ಲಿಗೆ ಕೊನೆ ಮಾಡೋಣ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಆಮಿಷಕ್ಕೆ ಒಳಗಾಗಿ ಹಣ ಪಡೆದು ಹೆಚ್.ವಿಶ್ವನಾಥ್ ಬಿಜೆಪಿಗೆ ಹೋಗಿದ್ದಾರೆ. ತಾವು ಹಣ ಪಡೆದಿಲ್ಲ ಎನ್ನುವುದಾದರೇ ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹಾಕಿದ್ದ ಸವಾಲಿಗೆ ಪ್ರತಿ ಸವಾಲು ಹಾಕಿದ್ದ ಹೆಚ್.ವಿಶ್ವನಾಥ್, ನನ್ನನ್ನ ಕೊಂಡುಕೊಂಡವರನ್ನ ಚಾಮುಂಡಿಬೆಟ್ಟಕ್ಕೆ ಕರೆತರಲಿ ಎಂದು ಪಂಥಹ್ವಾನ ನೀಡಿದ್ದರು.
Key words: mysore-H.vishwanath-former minister-sa.ra Mahesh-chamundi hills