ಮೈಸೂರು,ಅ,18,2019(www.justkannada.in): ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಡುವೆ ನಡೆದ ಆಣೆ ಪ್ರಮಾಣ ಹೈಡ್ರಾಮಾ ಕುರಿತು ಪ್ರತಿಕ್ರಿಯಿಸಿರುವ, ಆ ವ್ಯಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ ಆಣೆ ಪ್ರಮಾಣ ಏತಕ್ಕಾಗಿಬೇಕು. ದುಡ್ಡು ಕೊಟ್ಟವರು ಬರ್ತಾರಾ, ಬರೋಕೆ ಸಾಧ್ಯವಾ?. ಆ ವ್ಯಕ್ತಿ ಮುಖವಾಡಕ್ಕೆ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೆಚ್.ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಶ್ವನಾಥ್ ಬಗ್ಗೆ ಮಾತನಾಡದೇ ಇರೋದೇ ಒಳ್ಳೆಯದು. ಈ ಬಗ್ಗೆ ಸಾರಾ ಮಹೇಶ್ ಗೆ ನಾನು ಸಲಹೆ ಕೊಟ್ಟಿದ್ದೇನೆ. ಆ ವ್ಯಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ ಆಣೆ ಪ್ರಮಾಣ ಏತಕ್ಕಾಗಿ ಬೇಕು. ದುಡ್ಡು ಕೊಟ್ಟವರು ಬರ್ತಾರಾ, ಬರೋಕೆ ಸಾಧ್ಯವಾ?. ದೇಶದಲ್ಲಿ ತ್ಯಾಗ ಮಾಡಿ ಜನಪರ ಸರ್ಕಾರ ಮಾಡುವುದಕ್ಕೆ ಇವರು ಹೋಗಿದ್ದಾರಾ?. ಆ ವ್ಯಕ್ತಿ ಮುಖವಾಡಕ್ಕೆ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ ಆ ವ್ಯಕ್ತಿಯ ಬಗ್ಗೆ ಚರ್ಚೆ ಅನಗತ್ಯವೆಂದು ತಿಳಿಸಿದರು.
ಹುಣಸೂರು ಬೈ ಎಲೆಕ್ಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನ ನಿಲ್ಲಿಸುತ್ತೇವೆ. ಸೋಲು ಗೆಲುವು ಎರಡನ್ನ ಸ್ವೀಕಾರ ಮಾಡಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವಂತಹ ಶಕ್ತಿ ಕಾರ್ಯಕರ್ತರಲ್ಲಿ ಇದೆ. ಜನರು ಆ ತೀರ್ಮಾನಕ್ಕೆ ಬರುವ ಅಭಿಪ್ರಾಯ ಇದೆ ಎಂದು ಹೇಳಿದರು.
ಮಹಾರಾಷ್ಟ್ರಕ್ಕೆ ಕುಡಿಯುವ ನೀರು ಒದಗಿಸುತ್ತೇವೆ ಎಂದ ಸಿಎಂ ಬಿಎಸ್ ವೈ ವಿರುದ್ದ ಕಿಡಿ…
ಮಹಾರಾಷ್ಟ್ರಕ್ಕೆ ಕುಡಿಯುವ ನೀರು ಒದಗಿಸುತ್ತೇವೆ ಎಂಬ ಸಿಎಂ ಬಿಎಸ್ ವೈ ಹೇಳಿಕೆ ಬಗ್ಗೆ ಟೀಕೆ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ, ಕಳೆದ ವರ್ಷ ಮಹಾರಾಷ್ಟ್ರ ಸರ್ಕಾರಕ್ಕೆನಾವು ಹಲವಾರು ಬಾರಿ ವಿನಂತಿಸಿಕೊಂಡರೂ ನಮ್ಮ ರೈತರಿಗೆ ನೀರು ಬಿಡಲಿಲ್ಲ. ನಾನು ಹಾಗೂ ನಮ್ಮ ಮುಖ್ಯಕಾರ್ಯದರ್ಶಿಗಳು ಮನವಿ ಮಾಡಿಕೊಂಡವು. ಜೊತೆಗೆ ನಮ್ಮ ನೀರಾವರಿ ಸಚಿವರು ಹಾಗೂ ಪ್ರಭಾಕರ್ ಕೋರೆ ಅವರ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಹಲವಾರು ಬಾರಿ ವಿನಂತಿಸಿಕೊಂಡರು ನೀರು ಬಿಡಲಿಲ್ಲ . ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನೀರು ಬಿಡುವುದಾಗಿ ತಿಳಿಸಿರುವುದು ಎಷ್ಟರಮಟ್ಟಿಗೆ ಸರಿಯದಾ ಹೇಳಿಕೆ..? ಇದನ್ನ ಸಮರ್ಥಿಸಿಕೊಳ್ಳುತ್ತಿರುವ ಗೃಹ ಸಚಿವರ ಹೇಳಿಕೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಗುಡುಗಿದರು.
ಮಹದಾಯಿ ವಿಚಾರವಾಗಿ ಸಾವಿರಾರು ಪ್ರತಿಭಟನಾಕಾರರ ಕುಟುಂಬ ಸಮೇತವಾಗಿ ಪ್ರತಿಭಟಿಸುತ್ತಿದ್ದರೂ ಅವರ ನೋವಿಗೆ ಸ್ಪಂದಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಇದುವರೆಗೂ ಸಹ ಯಾವುದೆ ಸರ್ಕಾರೀ ಪ್ರತಿನಿಧಿಗಳು ಬೇಟಿಯಾಗದೆ ಅವರನ್ನ ನಡುರಾತ್ರಿಯಲ್ಲಿ ಕೈ ಬಿಟ್ಟಿರುವುದು ಅಮಾನವೀಯ ಕೃತ್ಯವಾಗಿದೆ . ಉತ್ತರ ಕರ್ನಾಟಕ ಜನರ ನೋವಿಗೆ ಸ್ಪಂದಿಸಲು ನಾನು ಸಿದ್ದನಿದ್ದೇನೆ ಆದರೆ ಅವರೇ ನನ್ನನ್ನ ಸ್ವೀಕರಿಸಲು ಸಿದ್ದರಿಲ್ಲ ,ಈಗಾಗಲೇ ಮಾಜಿ ಸಚಿವ ಕೋನ ರೆಡ್ಡಿ ಮೂಲಕ ತಿಳಿಸಿದ್ದೇನೆ. ರಾಜ್ಯ ಸರ್ಕಾರ ಅನಾಗರಿಕ ವರ್ತನೆ ತೋರುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೇ ಸ್ಥಾನ ತ್ಯೆಜಿಸಲು ಸಿದ್ಧ….
ನನ್ನ ಶಾಸಕರಿಗೆ ನನ್ನ ಮೇಲೆ ವಿಶ್ವಾಸವಿಲ್ಲದಿದ್ದರೆ ನನ್ನ ಸ್ಥಾನ ತ್ಯಜಿಸಲು ಈಗಲೂ ನಾನು ಸಿದ್ದನಿದ್ದೇನೆ. ಹಾಲಿ ಶಾಸಕರಿಗೆ ಗೌರವಯುತವಾಗಿ ನಡೆಸಿಕೊಳ್ಳುವ ನಾಯಕನಿದ್ದರೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ದೇವೇಗೌಡರು ಕರೆದಿರುವ ಸಭೆಗೂ ನನಗೂ ಏನು ಸಂಬಂಧವಿಲ್ಲ. ಕಳೆದ 13 ವರ್ಷದ ರಾಜಕಾರಣದಲ್ಲಿ ಶಾಸಕರೊಂದಿಗೆ ಯಾವ ರೀತಿ ವರ್ತಿಸಿದ್ದೇನೆಂದು ನನಗೆ ಗೊತ್ತಿದೆ. ಕೆಲವರಿಗೆ ವೈಯಕ್ತಿಯ ಆಸೆಗಳಿರುತ್ತವೆ. ಅದನ್ನು ತೀರಿಸಿಕೊಳ್ಳಲು ಈ ರೀತಿ ಮುಂದಾಗಿದ್ದಾರೆ ಎಂದು ಹೇಳೀದರು.
ಬಸವರಾಜ ಹೊರಟ್ಟಿ ಅವರ ಹೇಳಿಕೆ ಹಾಗೂ ಪತ್ರಗಳನ್ನ ನೋಡಿದ್ದೇನೆ. ಅವರು 40 ತಿಂಗಳು ಸಚಿವರಾಗಲು ನಾನೇ ಶಿಫಾರಸ್ಸು ಮಾಡಿದ್ದೆ. ಇದುವರೆಗೂ ಯಾವ ಶಾಸಕರಿಗೂ ನಾನು ಅವಮಾನ ಮಾಡಿಲ್ಲ. ನಮ್ಮ ಪಕ್ಷಕ್ಕೆ ಬರುವವರು ಹೋಗುವವರು ಇರ್ತಾರೆ. ಈ ಬಗ್ಗೆ ತಲೆಕೆಸಿಕೊಳ್ಳುವ ಅವಶ್ಯಕತೆ ಇಲ್ಲ.
Key words: mysore- H, Vishwanath – swearing-Former CM- HD Kumaraswamy