ಮೈಸೂರು,ಆಗಸ್ಟ್,10,2024 (www.justkannada.in): ನಿನ್ನೆ ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ತಮ್ಮ ವಿರುದ್ದ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಿಎಂ ತವರಲ್ಲೇ ರಣಕಹಳೆ ಮೊಳಗಿಸಿದ್ದಾರೆ.
ಹೌದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನಿನ್ನೆಯ ಹೇಳಿಕೆಗಳಿಗೆ ತಿರುಗೇಟು ನೀಡಿದರು
ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳ ಹಳೆಯ ತುಣುಕುಗಳನ್ನು ಪ್ರದರ್ಶಿಸಿದ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಹೆಚ್ ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನ ಪ್ರಮುಖ ನಾಯಕರು, ಡಿ. ಕೆ ಶಿವಕುಮಾರ್ ತಾಯಿ ಹಾಗೂ ಅನ್ಯಾಯಕ್ಕೆ ಒಳಗಾಗಿರುವವರು ಮಾಡಿರುವ ಆರೋಪಗಳ ಹಳೆಯ ತುಣುಕುಗಳ ಪ್ರದರ್ಶನ ಮಾಡಿದರು. ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಹಳೆಯ ತುಣುಕುಗಳು ಪ್ರದರ್ಶಿಸಿದರು.
ನಂತರ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನನ್ನ ಯಡಿಯೂರಪ್ಪ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಶ್ರಮಪಟ್ಟು 105 ಸ್ಥಾನವನ್ನು ಯಡಿಯೂರಪ್ಪ ಪಡೆದ್ದಾಗ ಅಧಿಕಾರ ಸಿಗದ ಸಂದರ್ಭದಲ್ಲಿ ರಾಜಕೀಯವಾಗಿ ನನ್ನ ವಿರುದ್ದ ಯಡಿಯೂರಪ್ಪ ಮಾತಾಡಿದ್ದಾರೆ ಅದು ಸಹಜ. ವಿಧಾನಸಭೆಯಲ್ಲಿ ಅವತ್ತು ಯಡಿಯೂರಪ್ಪ ಅವರು ನನ್ನ ನಾಗರಹಾವು ಅಂದರು. ನಾನು ಡಿಕೆ ಶಿವಕುಮಾರ್ ಪಾಲಿಗೆ ನಾಗರಹಾವೇ. ಲೂಟಿ ಮಾಡುವ ಡಿ.ಕೆ ಶಿವಕುಮಾರ್ ಗೆ ನಾನು ನಾಗರಹಾವು ಎಂದು ಗುಡುಗಿದರು.
ನಾನು ಆ ಬಂಡೆ ಕಲ್ಲು ನಂಬಿಕೊಂಡೆ, ಮೈ ಮೇಲೆ ಎಳೆದುಕೊಂಡೆ.
ಸಿದ್ದರಾಮಯ್ಯ ಪರ ನಾನು ಬಂಡೆ ಥರ ಇದ್ದಿನಿ ಅಂದಿದ್ದಾರೆ ಡಿಕೆ ಶಿವಕುಮಾರ್. 2018ರಲ್ಲಿ ನಾನು ಆ ಬಂಡೆ ಕಲ್ಲು ನಂಬಿಕೊಂಡೆ ಬಂಡೆಯನ್ನು ಮೈ ಮೇಲೆ ಎಳೆದುಕೊಂಡೆ. ಕಾಂಗ್ರೆಸ್ ಗೆ ಲೋಕಸಭೆಯಲ್ಲಿ 8 ಸ್ಥಾನ ಬಂದಿದೆ. ನಾನು ಅದು 9 ಅನ್ನಲ್ಲ ಇನ್ನೊಂದು ಸ್ಥಾನ ಹೇಗೆ ಬಂತು ಅಂತಾ ನನಗೆ ಗೊತ್ತಿದೆ. ಸಿದ್ದರಾಮಯ್ಯ ಅವರೇ ನೀವು ಬರೀ ಹಿಂದುಳಿದ ವರ್ಗಗಳ ಸಿಎಂ ಅಲ್ಲ. ಆರುವರೆ ಕೋಟಿ ಜನರ ಸಿಎಂ ಎಂಬುದ ಅರಿಯಿರಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಮುಖದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂದರೆ ಹೇಗೆ?
ಸಿದ್ದರಾಮಯ್ಯ ಅವರು ಸಿಎಂ ಆದರೆ ನನಗೆ ಯಾಕೆ ಹೊಟ್ಟೆ ಉರಿ. ನನ್ನ ಪ್ರಶ್ನೆ ನಿಮ್ಮ ಅನ್ಯಾಯದ ವಿರುದ್ದ. ಸಿದ್ದರಾಮಯ್ಯ ಚಡ್ಡಿಯೆಲ್ಲಾ ಕಪ್ಪಾಗಿದೆ. ಮುಖದಲ್ಲಿ ಕಪ್ಪು ಚುಕ್ಕೆ ಇಲ್ಲ ಅಂದರೆ ಹೇಗೆ? ಎಂದು ಹೆಚ್.ಡಿಕೆ ಲೇವಡಿ ಮಾಡಿದರು.
ಸಿದ್ದರಾಮಯ್ಯ ಪತ್ನಿ ಬಗ್ಗೆ ನವು ಎಂದೂ ಮಾತನಾಡಿಲ್ಲ ಸಿಎಂ ಪತ್ನಿ ಪ್ರಮಾಣವಚನಕ್ಕೆ ಬಂದಿದ್ದರೋ ಬಿಟ್ಟರೋ ಗೊತ್ತಿಲ್ಲ. ನೀವು ಕಾನೂನಾತ್ಮಕಾವಾಗಿ ಎಷ್ಟು ಸೈಟ್ ಬೇಕಾದರೂ ತೆಗೆದುಕೊಳ್ಳಿ. ನಿಮ್ಮ ಧರ್ಮಪತ್ನಿ ಬಗ್ಗೆ ನಮಗೆ ಗೌರವವಿದೆ. ಕಾನೂನು ಬಾಹಿರವಾಗಿ ಮಾಡಿರೋ ಹಗರಣದ ಬಗ್ಗೆ ಮಾತನಾಡಿ. ಸಿಎಂ ಧರ್ಮಪತ್ನಿಗೆ ಅವರ ಅಣ್ಣ ಭೂಮಿ ದಾನಮಾಡಿರೋದು ಅಂತಾರೆ. ದಾನ ಮಾಡೋದು ತಪ್ಪ ಅಂತಾರೆ ಡಿಕೆಶಿ. ಆ ಭೂಮಿ ನಿಂಗಂದ್ದೂ ಅಲ್ಲ ಯಾರದ್ದೂ ಅಲ್ಲ. ಸರ್ಕಾರದ್ದು. ಮುಡಾ ಭೂಮಿ ಖರೀದಿಸಲು ಹೇಗೆ ಸಾಧ್ಯ.? ನೀವು ಪಡೆದ ಭೂಮಿ ಸರ್ಕಾರದ್ದು. ಡಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೋ ಇಲ್ಲವೋ . ನೀವು ಸಹಿ ಹಾಕದೇ ಇರಬಹುದು ಸಿದ್ದರಾಮಯ್ಯನವರೇ. ಆದರೆ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
Key words: mysore, HD Kumaraswamy, CM, Siddaramaiah, DK shivakumar