ಮೈಸೂರಿನಲ್ಲಿ ಕುಮಾರಸ್ವಾಮಿಗಿಂತಲೂ ದೊಡ್ಡ ಹೈಕಮಾಂಡ್ ಇದೆ‌- ಉಚ್ಛಾಟನೆ ವಿಚಾರ ಕುರಿತು ಶಾಸಕ ಜಿ.ಟಿ ದೇವೇಗೌಡ ಕಿಡಿ..

ಮೈಸೂರು,ಜನವರಿ,7,2021(www.justkannada.in): ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶಾಸಕ ಜಿ.ಟಿ ದೇವೇಗೌಡರನ್ನ ಜೆಡಿಎಸ್ ನಿಂದ ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ಧಿ ಹರಿದಾಡಿತ್ತು. ಇದೀಗ ಈ ಕುರಿತು  ಪ್ರತಿಕ್ರಿಯಿಸಿರುವ ಶಾಸಕ ಜಿ,ಟಿ ದೇವೇಗೌಡ, ಮೈಸೂರಿನಲ್ಲಿ ಕುಮಾರಸ್ವಾಮಿಗಿಂತಲೂ ದೊಡ್ಡ ಹೈಕಮಾಂಡ್ ಇದೆ. ಮೈಸೂರಿನ ಹೈಕಮಾಂಡ್ ಕೂಡ ಮೈಸೂರಿನಲ್ಲಿಂದಲೇ ಉಚ್ಛಾಟನೆ ಪ್ರಕ್ರಿಯೆ ಶುರುವಾಗುತ್ತೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಮಾತ್ರ ಉಚ್ಛಾಟನೆ ಪದ ಬಳಸಿಲ್ಲ ಎಂದು ಸಾ.ರಾ ಮಹೇಶ್ ಹೆಸರೇಳದೆ ಟಾಂಗ್ ನೀಡಿದರು.mysore-hd-kumaraswamy-mla-gt-deve-gowda-jds-expulsion

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಜಿ.ಟಿ ದೇವೇಗೌಡರು, ನಾನು ಯಾವುದೇ ಹಂತದಲ್ಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.  ಮೈಸೂರಿನಲ್ಲಿ ಕೆಲವರು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್‌ನಿಂದ ವೀಕ್ ಕ್ಯಾಂಡೇಟ್ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಬೇರೆ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಂದು ವೇಳೆ ಉಚ್ಛಾಟನೆ ಮಾಡುವುದಾದರೆ ಅವರನ್ನು ಮಾಡಬೇಕು. ದೇವೇಗೌಡರಿಗೆ ಎಲ್ಲವೂ ಗೊತ್ತು.  ಪ್ರತಿಯೊಬ್ಬ ಶಾಸಕ, ನಾಯಕರೂ ಏನೇನು ಮಾಡುತ್ತಿದ್ದಾರೆ ಅನ್ನುವುದರ ಇಂಚಿಂಚು, ಎಲುಬು- ಎಲುಬೂ ಗೊತ್ತು ಎಂದು ವಾಗ್ದಾಳಿ ನಡೆಸಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಉಚ್ಚಾಟನೆ ಮಾಡಲಿ….

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಉಚ್ಚಾಟನೆ ಮಾಡಲಿ. ಅದನ್ನ ನಾನು ಸ್ವಾಗತ ಮಾಡ್ತಿನಿ. ಉಚ್ಚಾಟನೆ ಮಾಡುವ ಪಟ್ಟಿಯಲ್ಲಿ ನಾನಿರುವುದಿಲ್ಲ. ಯಾಕಂದ್ರೆ ನಾನು ಯಾವ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಿಳಿಸಿದರು.

ನಾನೇನು ಹೆಚ್.ಡಿಕೆ,  ದೇವೇಗೌಡರ ವಿರುದ್ದ ಮಾತನಾಡಿದ್ದೀನಾ?.

ನಾನು ಜೆಡಿಎಸ್‌ ನಲ್ಲಿ ಒಂದೇ ಒಂದು ಸಣ್ಣ ತಪ್ಪನ್ನು ಮಾಡಿಲ್ಲ. ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೋ ಅವರನ್ನ ಉಚ್ಛಾಟನೆ ಮಾಡಲಿ. ನಾನೇನು ದೇವೇಗೌಡರ ವಿರುದ್ದ ಮಾತನಾಡಿದ್ದೀನಾ?. ಕುಮಾರಸ್ವಾಮಿ ವಿರುದ್ದ ಮಾತನಾಡಿದ್ದೀನಾ? ಅಥವಾ ರೇವಣ್ಣ ವಿರುದ್ದ ಮಾತನಾಡಿದ್ದೀನಾ..? ಎಂದು ಪ್ರಶ್ನಿಸಿದ ಶಾಸಕ ಜಿ.ಟಿ ದೇವೇಗೌಡ, ಅದ್ಯಾವ ಪಕ್ಷ ವಿರೋಧಿ ಕೆಲಸ ಮಾಡಿದ್ದೀನಿ ತೋರಿಸಲಿ ಎಂದು ಹರಿಹಾಯ್ದರು.

ಕಳೆದ ಚುನಾವಣೆಯಲ್ಲಿ ನನ್ನ ಮಗನಿಗೆ ಹುಣಸೂರು ಟಿಕೆಟ್ ಕೊಡಲಿಲ್ಲ. ಆದ್ರೂ ನಾವು ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಿ ಗೆಲ್ಲಿಸಿದೇವು. ಪಾರ್ಟಿಯಲ್ಲೆ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ? ಎಂದು ಜಿ.ಟಿಡಿ ಪ್ರಶ್ನಿಸಿದರು.mysore-hd-kumaraswamy-mla-gt-deve-gowda-jds-expulsion

ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಕೂಗು ಆರಂಭವಾಗಿದ್ದು ಮೈಸೂರಿನಿಂದಲೇ. 1994ರಲ್ಲಿ ದೇವೇಗೌಡರ ರಾಜಕೀಯ ಬದಲಾವಣೆ ಆಗಿದ್ದು ಮೈಸೂರಿನಿಂದಲೇ. ಎರಡನೆ ಬಾರಿ ಕುಮಾರಸ್ವಾಮಿ ಸಿಎಂ ಆಗಬೇಕೆಂದು ಹೇಳಿದ್ದು ಸಹ ಮೈಸೂರಿನಿಂದಲೇ. ಹಾಗಾಗಿ ಅವರಿಗೆ ಎಲ್ಲ ಕೆಲಸ ಮೈಸೂರಿನಿಂದ ಆರಂಭವಾದ್ರೆ ಶುಭ ಅಂತ ಅನ್ನಿಸಿದೆ. ಮೈಸೂರಿನಿಂದಲೇ ಪಕ್ಷ ಶುದ್ದಿ ಮಾಡುವ ಚಿಂತನೆ ಮಾಡಿರಬಹುದು. ಇಲ್ಲಿಂದ ಆರಂಭಿಸಿದ್ರೆ ಪಕ್ಷ ಸಂಘಟನೆಯ ಆಗುವ ಉದ್ದೇಶದಿಂದ ಮಾತನಾಡಿರಬಹುದು. ನಾಯಕರ ನಿರ್ಧಾರವನ್ನ ಸ್ವಾಗತ ಮಾಡುತ್ತೇನೆ ಎಂದು ಶಾಸಕ ಜಿ.ಟಿ ದೇವೇಗೌಡರು ಹೇಳಿದರು.

ENGLISH SUMMARY….

High Command which is higher than HDK exists in Mysuru – MLA GTD on warning of expulsion from party
Mysuru, Jan. 07, 2021 (www.justkannada.in): Rumours of the expulsion of JDS MLA G.T. Devegowda from the party who is facing allegations of involving in anti-party activities were making rounds. Reacting to the rumours today in Mysuru MLA G.T. Devegowda said that a high command which is higher than H.D. Kumaraswamy exists in Mysuru. “The High Command in Mysuru has also informed that the expulsion process will begin from Mysuru itself. But Kumaraswamy has not used the word ‘expulsion’,” he said sarcastically.mysore-hd-kumaraswamy-mla-gt-deve-gowda-jds-expulsion
“If anyone is involved in anti-party activities let them expel them, I also welcome it. I will never be on that list,” he said.
Keywords: G.T. Devegowda/ anti-party activities/ JDS/ expulsion

Key words: Mysore –HD Kumaraswamy-MLA- GT Deve Gowda – JDS-Expulsion