ಮೈಸೂರು, ಮಾ.03, 2020 : ( www.justkannada.in news ) ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ನಗರದ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಇಂದು ಆಯೋಜಿಸಿದ್ದ ‘ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷಾ ಶಿಬಿರ ‘ ವನ್ನು ನಟಿ ಅಮೂಲ್ಯ ಉದ್ಘಾಟಿಸಿದರು.
ಶ್ರವಣ ದೋಷ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿರುವ ನಟಿ ಅಮೂಲ್ಯ ಶಿಬಿರ ಉದ್ಘಾಟಿಸಿ, ಇಂದು ವಿಶ್ವದಾದ್ಯಂತ ‘ ಶ್ರವಣ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಹುಟ್ಟಿದ ದಿನದಂದೇ ಮಕ್ಕಳ ಶ್ರವಣ ದೋಷ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಇದೀಗ ಜಾರಿಯಾಗಿದೆ. ಇದರಿಂದ ಪೋಷಕರು ನವಜಾತ ಶಿಶುಗಳ ಶ್ರವಣ ಪರೀಕ್ಷೆ ಮಾಡಿಸಿ ಆರಂಭದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಓಟೋಕಾಸ್ಟಿಕ್ ಎಮಿಷನ್ ( otoacoustic emission -OAE) ಉಪಕರಣದಿಂದ ಇಂದೇ ಹುಟ್ಟಿದ ಮಕ್ಕಳಿಗೆ ಶ್ರವಣದೋಷ ಪತ್ತೆ ಹಚ್ಚುವ ಶಿಬಿರ ಮಂಗಳವಾರ ಸಂಜೆವರೆಗೂ ನಡೆಯಿತು.
ಶಿಬಿರದ ಅಂಗವಾಗಿ ಚೆಲುವಾಂಬ ಆಸ್ಪತ್ರೆಯ 10 ಶಿಶುಗಳಿಗೆ ಹಿಯರಿಂಗ್ ಸ್ಕ್ರೀನಿಂಗ್ ಮಾಡಲಾಯಿತು. ಜತೆಗೆ ಮೈಸೂರಿನ 15 ಹೆರಿಗೆ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಿಯೋಲಜಿಸ್ಟ್ ಗಳಿಂದ ನವಜಾತ ಶಿಶುಗಳಿಗೆ ಶ್ರವಣ ದೋಷ ಪತ್ತೆ ಮಾಡುವ ಸ್ಕ್ರೀನಿಂಗ್ ಶಿಬಿರವನ್ನು ಸಹ ಇಂದು ಆಯೋಜಿಸಲಾಗಿತ್ತು.
key words : mysore-hearing-day- otoacoustic emission- OAE-kannada-cine-star-amulya