ಮೈಸೂರು,ಸೆ,7,2019(www.justkannada.in): ಮೈಸೂರಿನಲ್ಲಿ ಕೆಲ ಕಾಲ ಭಾರಿ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿ ಸಾರ್ವಜನಿಕರು ಹೈರಾಣಾದರು.
ಕೆಲ ನಿಮಿಷಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವರುಣನ ಅಬ್ಬರದಿಂದ ಮ್ಯಾನ್ ಹೋಲ್ ಗಳು ಉಕ್ಕಿ ಹರಿದವು. ಧಾರಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯಿಂದಾಗಿ ಮೈಸೂರಿನ ಕೆ.ಆರ್. ಮಾರ್ಕೆಟ್ ಜಲಾವೃತಗೊಂಡಿದ್ದು, ಸುಮಾರು ಒಂದು ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಂತ ಪರಿಣಾಸಾರ್ವಜನಿಕರು ಹೈರಾಣದರು.
ಮತ್ತೋಂದೆಡೆ ಮಹಾ ಮಳೆಯಿಂದ ದೊಡ್ಡ ಗಡಿಯಾರ ವೃತ್ತ ಜಲಾವೃತಗೊಂಡು ಗಡಿಯಾರ ಅಕ್ಕಪಕ್ಕ ಇರುವ ಫುಟ್ಬಾತ್ ಮೇಲೂ ನೀರು ಹರಿದು ಪಾದಾಚಾರಿಗಳು ಸಂಚರಿಸಲು ತಿಣುಕಾಡುವ ಸ್ಥಿತಿ ನಿರ್ಮಾಣವಾಗಿತ್ತು.
key words: Mysore- heavy rain- roads- overflowing -manholes