ಮೈಸೂರು,ಜನವರಿ,27,2022(www.justkannada.in): ಹೆಲಿ ಟೂರಿಸಮ್ ಮಾಡಿದರೆ ನೈಸರ್ಗಿಕ ಸಂಪತ್ತು ಹಾಳಾಗುವುದು. ಹೀಗಾಗಿ ಯಾವುದೇ ಕಾರಣಕ್ಕೂ ಮೈಸೂರಿಗೆ ಹೆಲಿಟೂರಿಸಂ ಬೇಡ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೈಸೂರಿನಲ್ಲಿ ಹೆಲಿ ಟೂರಿಸಂ ವಿರೋಧಿಸಿ ನಗರದ ಲಲಿತ್ ಮಹಲ್ ಪ್ಯಾಲೇಸ್ ಮುಂಭಾಗ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಸುತ್ತ ಮುತ್ತ ಹಲವಾರು ವೀಕ್ಷಣೆ ಮಾಡುವ ಪ್ರದೇಶಗಳಿವೆ. ಶ್ರೀರಂಗಪಟ್ಟಣ ಪಕ್ಷಿಧಾಮ, ಚಾಮುಂಡಿಬೆಟ್ಟ, ಮೃಗಾಲಯ ಹಾಗೂ ಹಲವು ವೀಕ್ಷಿಸುವ ಸ್ಥಳಗಳಿವೆ.
ಪ್ರಾಣಿ ಪಕ್ಷಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ಹೆಲಿ ಟೂರಿಸಂ ಮಾಡಿದರೆ ಪಕ್ಷಿಗಳಿಗೆ ತೊಂದರೆ ಉಂಟಾಗುತ್ತದೆ. ಹೆಲಿ ಟೂರಿಸಮ್ ಮಾಡಿದರೆ ನೈಸರ್ಗಿಕ ಸಂಪತ್ತು ಹಾಳಾಗುವುದು. ಮರಗಳ ಹನನವಾಗಲಿವೆ. ಯಾವುದೇ ಕಾರಣಕ್ಕೂ ಮೈಸೂರಿಗೆ ಹೆಲಿಟೂರಿಸಂ ಬೇಡ ಎಂದರು.
Key words: Mysore – Helitourism- Vatal Nagaraj