ಮೈಸೂರು, ಜು.21, 2022 : (www.justkannada.in news) ಹಿರಿಯ ಕೆಎಎಸ್ ಅಧಿಕಾರಿ ಎ.ದೇವರಾಜು ಪುರಾತತ್ವ, ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
ಮೈಸೂರು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಇಲಾಖೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿದ್ದರು.
೧೯೯೮ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿರುವ ಎ.ದೇವರಾಜು ಅವರು ಗುಂಡ್ಲುಪೇಟೆ, ಮಡಿಕೇರಿ, ಸೋಮವಾರಪೇಟೆ ಹಾಗೂ ಗುಡಿಬಂಡೆ ತಹಸಿಲ್ದಾರ್ ಆಗಿ ಕಾರ್ಯನಿರ್ವಹಿಸಿ ಉಪವಿಭಾಗಾಧಿಕಾರಿಯಾಗಿ ಬಡ್ತಿ ನಂತರ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ, ನಾಲ್ಕು ವರ್ಷ ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ, ಹೆದ್ದಾರಿ ಪ್ರಾಧಿಕಾರದ ಭೂಸ್ವಾಧಿನಾಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಆಯ್ಕೆ ಶ್ರೇಣಿಗೆ ಬಡ್ತಿ ಪಡೆದು ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಆಯುಕ್ತರ ಕಚೇರಿಯಿದೆ.
ರಾಜ್ಯದಲ್ಲಿ ೮೪೪ ಸ್ಮಾರಕಗಳು, ೧೬ ವಸ್ತು ಸಂಗ್ರಹಾಲಯಗಳು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಲಾಖೆ ಕಚೇರಿಗಳಿವೆ. ನಾಡಿನ ಪುರಾತತ್ವ, ಪರಂಪರೆ ಕುರಿತು ಕೆಲಸ ಮಾಡಲು ಇಲ್ಲಿ ಅವಕಾಶವಿದೆ. ಈ ಹಿಂದಿನ ಅಧಿಕಾರಿಗಳ ಅನುಭವ, ಕ್ಷೇತ್ರದ ತಜ್ಞರು, ನಾಡಿನ ಬೇರೆ ಬೇರೆ ಕ್ಷೇತ್ರದವರ ಸಲಹೆ ಪಡೆದು ಕಾರ್ಯ ನಿರ್ವಹಿಸುವೆ. ಕಾಲೇಜುಗಳಲ್ಲಿ ಇದ್ದ ಪರಂಪರೆ ಕ್ಲಬ್‌ಗಳಿಗೆ ಒತ್ತು ನೀಡುವ ಯೋಜನೆಯೂ ಇದೆ ಎಂದು ದೇವರಾಜು ತಿಳಿಸಿದರು.
key words : Mysore-heritage-commissioner-devraj-KAS