ಮೈಸೂರು,ಆ,1,2019(www.justkannada.in): ಆಸ್ಪತ್ರೆಗಳಿಗೆ ಹೋಗುವ ರೋಗಿಗಳ ಜೀವ ಉಳಿಸಲು ವೈದ್ಯರು ಹಾಗೂ ಸಿಬ್ಬಂದಿಗಳು ಸಾಕಷ್ಟು ಕಾಳಜಿ ವಹಿಸೋದು ನಿಜ. ಆದ್ರೆ ಪ್ರಾಣಿಗಳಿಗೆ ತೊಂದ್ರೆ ಆದಾಗ…? ಈ ವಿಚಾರದಲ್ಲೂ ಸೈ ಅಂತ ನಿರೂಪಿಸಿದ್ದಾರೆ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಸಿಬ್ಬಂದಿಗಳು.
ಹೌದು, ನಗರದ ನಜರಬಾದ್ ನಲ್ಲಿರುವ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮೊದಲನೇ ಮಹಡಿಯ ಮುಂಭಾಗದಲ್ಲಿ ಪಕ್ಷಿಗಳು ಒಳಗೆ ನುಸುಳಬಾರದೆಂಬ ಕಾರಣಕ್ಕೆ ಬಲೆ ಕಟ್ಟಿದ್ದಾರೆ. ಈ ನಡೆವೆ ಪಾರಿವಾಳವೊಂದು ಆಕಸ್ಮಿಕವಾಗಿ ಬಲೆಗೆ ಸಿಲುಕಿಕೊಂಡಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ನರಳಾಡುತ್ತಿತ್ತು.
ತಲೆಕೆಳಗಾಗಿ ಒದ್ದಾಡುತ್ತಾ ಜೀವನ್ಮರಣದ ನಡುವೆ ಪಾರಿವಾಳ ಹೋರಾಟ ನಡೆಸುತ್ತಿತ್ತು. ಈ ಮಾಹಿತಿಯನ್ನ ಆಸ್ಪತ್ರೆ ಸಿಬ್ಬಂದಿಗಳ ಗಮನಕ್ಕೆ ತಂದಾಗ ಕೂಡಲೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿಗಳು ಬಲೆಗೆ ಸಿಲುಕಿದ್ದ ಪಾರಿವಾಳವನ್ನ ಬಿಡಿಸಿ ಮಾನವೀಯತೆ ಮೆರೆದಿದ್ದಾರೆ. ಪಾರಿವಾಳದ ಒಂದು ಕಾಲು ಕತ್ತರಿಸಿ ಹೋಗಿದ್ದರೂ ಬಲೆಯಿಂದ ಹೊರಬಿದ್ದ ಪಾರಿವಾಳ ಸ್ವಾತಂತ್ರ ಸಿಕ್ಕಷ್ಟೇ ಸಂತೋಷದಿಂದ ಹಾರಿ ಹೋಗಿದೆ. ಪ್ರಾಣ ಉಳಿದ ಖುಷಿ ಪಾರಿವಾಳಕ್ಕಾದರೇ. ಪ್ರಾಣ ಉಳಿಸಿದ ಖುಷಿ ಆಸ್ಪತ್ರೆ ಸಿಬ್ಬಂದಿ ಸತೀಶ್ ಗೆ ಆಗಿದೆ.
Key words: mysore-Hospital- staff -saved – pigeon’s- life