ಆ.14 ರಂದು ಬೃಹತ್ ಮೆಗಾ ಲೋಕ್ ಅದಾಲತ್: ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಕ್ರಮ- ನ್ಯಾಯಾಧೀಶ ಎಂ.ಎಲ್ ರಘುನಾಥ್.

ಮೈಸೂರು,ಜುಲೈ,31,2021(www.justkannada.in): ಆಗಸ್ಟ್ 14 ರಂದು ಬೃಹತ್ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದ್ದು , ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ತಿಳಿಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಎಂ ಎಲ್ ರಘುನಾಥ್, ಕೋವಿಡ್ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಅದಾಲತ್ ಮಾಡಲಾಗುತ್ತಿದೆ. ಮೈಸೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಬಾರಿ ಲೋಕ ಅದಾಲತ್ ನಲ್ಲಿ ಎಂವಿಸಿ ಪ್ರಕರಣ, ಬ್ಯಾಂಕ್ ಸೂಟ್ಸ್ ಪ್ರಕರಣ ಒಳಗೊಂಡಿರುತ್ತದೆ. ಭೂ ಸ್ವಾಧೀನ ಪ್ರಕರಣಗಳು ಜಾಸ್ತಿ ಇವೆ. ಈ ಅದಾಲತ್ ನಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಯಾವುದೇ ಕೋರ್ಟ್ ಗೆ ಫೀಸ್ ಕೊಡಬೇಕಿಲ್ಲ. ಲೋಕ್ ಅದಾಲತ್ ನಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ. ಪ್ರಕರಣಗಳು ರಾಜಿಯಾದಲ್ಲಿ  ಶೇಕಡಾ 100 ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಯಾರೇ ಇದ್ದರೂ ನೇರವಾಗಿ ನ್ಯಾಯಲಯಕ್ಕೆ ಬಂದು ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಬಹುದು. ಮೈಸೂರು ನಗರ ಹಾಗೂ ತಾಲ್ಲೂಕುಗಳಲ್ಲಿ  81585 ಪ್ರಕರಣ ರಾಜಿಯಾಗಬಲ್ಲ ಪ್ರಕರಣಗಳಾಗಿವೆ. 23217 ಪ್ರಕರಣಗಳನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದೇವೆ. ಲೋಕ್ ಅದಾಲತ್ ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಯಸುವವರು ನೇರವಾಗಿ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಟ್ಟಿದ್ದೇವೆ. ಇಲ್ಲಿ ಇಬ್ಬರಿಗೂ ಗೆಲವು ತಂದು ಕೊಡುತ್ತದೆ. ಕಾನೂನು ಸಮ್ಮತವಾಗಿ ನ್ಯಾಯ ಪಡೆದುಕೊಂಡಿರುತ್ತಾರೆ. ಇದಕ್ಲೆ ವಕೀಲರ ಸಹಕಾರವೂ ಅತ್ಯಗತ್ಯ ಎಂದು ಎಂ.ಎಲ್ ರಘುನಾಥ್ ಹೇಳಿದರು.

Key words: mysore- Huge- Mega Lok Adalat-aug 14th-Justice- ML Raghunath